ಕಲಬುರಗಿ: ಕೊರೊನಾ ವೈರಸ್ ಭೀತಿಯ ಜೊತೆಗೆ ಜಿಲ್ಲೆಯ ಕಮಲಾಪುರ ತಾಲೂಕಿನ ಬಬಲಾದ್ ಗ್ರಾಮಸ್ಥರಿಗೆ ಚಿರತೆ ಭಯ ಶುರುವಾಗಿದೆ.
ಕೊರೊನಾ ಸಂಕಟದ ನಡುವೆ ಕಲಬುರಗಿಯಲ್ಲಿ ಚಿರತೆ ಪತ್ಯಕ್ಷ.. ಅರಣ್ಯ ಇಲಾಖೆ ಕಾರ್ಯಾಚರಣೆ - ಕಲಬುರಗಿಯಲ್ಲಿ ಚಿರತೆ ಪತ್ಯಕ್ಷ
ಸುಮಾರು 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಕಬ್ಬಿನ ಗದ್ದೆಯಲ್ಲಿ ಬೋನ್ ಇರಿಸಿ, ಬೋನಿನಲ್ಲಿ ನಾಯಿ ಬಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.

ಬಬಲಾದ್ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಕಳೆದ ಎರಡು ದಿನಗಳಿಂದ ಚಿರತೆಯೊಂದ ಪ್ರತ್ಯಕ್ಷವಾಗುತ್ತಿದೆ. ಗ್ರಾಮದಲ್ಲಿ ಚಿರತೆ ಓಡಾಡುತ್ತಿರುವುದರ ಬಗ್ಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಅದನ್ನ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಕಬ್ಬಿನ ಗದ್ದೆಯಲ್ಲಿ ಬೋನ್ ಇರಿಸಿ, ಬೋನಿನಲ್ಲಿ ನಾಯಿ ಬಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.
ಒಂದು ವೇಳೆ ಬೋನ್ ಪ್ಲಾನ್ ವರ್ಕೌಟ್ ಆಗದಿದ್ರೆ, ನಾಳೆಯಿಂದ ಡ್ರೋಣ್ ಕ್ಯಾಮೆರಾ ಮೂಲಕ ಅಧಿಕಾರಿಗಳು ಚಿರತೆ ಕಾರ್ಯಾಚರಣೆ ನಡೆಸಲಿದ್ದಾರೆ. ಬಬಲಾದ ಗ್ರಾಮದ ಜನರಿಗೆ ಮಾರಣಾಂತಿಕ ಕೊರೊನಾ ವೈರಸ್‌ನ ಆತಂಕದ ಜೊತೆಗೆ ಚಿರತೆಯ ಭಯವೂ ಕೂಡ ಕಾಡುತ್ತಿದೆ.