ಕರ್ನಾಟಕ

karnataka

ETV Bharat / state

ಗೋಮಯ ದೀಪಾವಳಿ ಆಚರಣೆಗೆ ಒತ್ತು; ಕಲಬುರಗಿಯಲ್ಲಿ ತಯಾರಾಗ್ತಿವೆ ಸಾವಿರಾರು ಗೋಮಯ ಹಣತೆಗಳು - ಸರಳವಾಗಿ ಹಬ್ಬ ಆಚರಣೆಗೆ ಸರ್ಕಾರ ಕರೆ

ಈ ಬಾರಿ ಸರಳವಾಗಿ ಹಬ್ಬ ಆಚರಣೆಗೆ ಸರ್ಕಾರ ಕರೆ ನೀಡಿದೆ. ಇದಕ್ಕೆ ಪುಷ್ಟಿ ನೀಡಲು ಕಲಬುರಗಿಯಲ್ಲಿ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆಯಲ್ಲಿ ಗೋಮಯ ಹಣತೆಗಳನ್ನು ತಯಾರಿಸುತ್ತಿದೆ. ಈ ಕುರಿತ ಒಂದು ವರದಿ.

ಗೋಮಯ ಹಣತೆಗಳು
ಗೋಮಯ ಹಣತೆಗಳು

By

Published : Nov 12, 2020, 11:01 PM IST

ಕಲಬುರಗಿ:ಹೆಮ್ಮಾರಿ ಕೊರೊನಾ ಇನ್ನೂ ದೇಶವನ್ನು ಬಿಟ್ಟು ತೊಲಗಿಲ್ಲ. ಕೋವಿಡ್ ನಿಂದಾಗಿ ಈ ಬಾರಿ ಯಾವ ಹಬ್ಬವನ್ನೂ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಿಲ್ಲ. ಅದರಂತೆ ದೀಪಾವಳಿಯನ್ನು ಸಹ ಪರಿಸರ ಸ್ನೇಹಿ ಹಬ್ಬವನ್ನಾಗಿ ಆಚರಿಸುವಂತೆ ಸರ್ಕಾರ ಕರೆ ಸೂಚಿಸಿದೆ. ಆದ್ದರಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಗೋವಿನ ಸಗಣಿಯ ದೀಪಗಳಿಂದ ದೀಪಾವಳಿ ಆಚರಿಸಲು ತಯಾರಿ ನಡೆಸಲಾಗುತ್ತಿದೆ.

ಕಲಬುರಗಿಯಲ್ಲಿ ತಯಾರಾಗ್ತಿದೆ ಹೋಮಯ ಹಣತೆಗಳು

ಹೌದು, ಸದ್ಯ ಕೊರೊ‌ನಾ ಇಳಿಮುಖವಾಗಿದೆಯಾದ್ರೂ ಮಾಹಾಮಾರಿ ಇನ್ನೂ ಸಂಪೂರ್ಣವಾಗಿ ನಾಶವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಬಾರಿ ಹಸಿರು ಪಟಾಕಿ ಸಿಡಿಸುವ ಮೂಲಕ ಮಾಲಿನ್ಯ ಮುಕ್ತ, ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಸೂಚಿಸಿದೆ. ಆದರಿಂದ, ಇದೇ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಒಟ್ಟಾಗಿ ಗೋಮಯ ದೀಪಾವಳಿ ಆಚರಿಸಲು ಮುಂದಾಗಿವೆ. ಇದಕ್ಕಾಗಿ ಕಲಬುರಗಿಯಲ್ಲಿ ಸಾವಿರಾರು ಗೋವಿನ ಹಣತೆಗಳು ಸಿದ್ಧಪಡಿಸಲಾಗಿದೆ. ಕೇಂದ್ರದ ಆತ್ಮನಿರ್ಭರ ಭಾರತದ ಕಲ್ಪನೆಗೆ ಅನುಗುಣವಾಗಿ ಗೋವಿನ ಸೆಗಣಿಯಿಂದ ವಿನೂತನ ದೀಪಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಗೋವಿನ ಹಣತೆ ತಯಾರಿಸುವುದು ಹೇಗೆ.?

ಗೋವಿನ ಸೆಗಣಿಯಿಂದ ಮಾಡಿದ ಪ್ರಣತಿಯೊಂದಿಗೆ ದೀಪಾವಳಿ ಆಚರಿಸುವುದೇ ಗೋಮಯ ದೀಪಾವಳಿ. ಗೋವಿನ ಸಗಣಿ, ಗೋ ಮೂತ್ರ, ಅನ್ನದ ಗಂಜಿ ಹಾಗೂ ಕಟ್ಟಿಗೆ ಪುಡಿಗಳ ಮಿಶ್ರಣದೊಂದಿಗೆ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ. ಕಲಬುರಗಿ ನಗರದ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆಯಲ್ಲಿ ಈ ಹಣತೆಗಳನ್ನು ತಯಾರಿಸಲಾಗುತ್ತಿದೆ.

15 ರೂಪಾಯಿಗೆ ಜೋಡಿ ಪ್ರಣತಿಗಳ ಮಾರಾಟ:

ಮೊದಲ ಬಾರಿ ಗೋಮಯ ದೀಪಾವಳಿ ಆಚರಣೆಗಾಗಿ ಸಗಣಿ ಹಣತೆಗಳ ತಯಾರಿಕೆಗೆ ಮುಂದಾಗಿರುವುದರಿಂದ ಪ್ರಯೋಗಿಕವಾಗಿ ಈ ವರ್ಷ 10 ಸಾವಿರ ಗೋವಿನ ಪ್ರಣತಿ ಮಾರಾಟಕ್ಕೆ ಸಿದ್ದಪಡಿಸಲಾಗಿದೆ. 15 ರೂಪಾಯಿಗೆ ಜೋಡಿ ಪ್ರಣತಿಗಳನ್ನು ಮಾರಾಟ ಮಾಡಲಾಗುವುದು.

ಒಟ್ಟಿನಲ್ಲಿ ಸರ್ಕಾರದ ಅಧಿಸೂಚನೆಯಂತೆ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಹಾಗೂ ಕೇವಲ ಗೋವಿನ ಹಾಲು ಮಾತ್ರವಲ್ಲ ಪ್ರಣತಿ ಸೇರಿ ವಿವಿಧ ಉತ್ಪನ್ನಗಳನ್ನು ಗೋವಿನ ಸೆಗಣಿ, ಮೂತ್ರದಿಂದ ತಯಾರಿಸಿ ಬಳಸಬಹುದು. ಆದರಿಂದ ಈ ಬಾರಿ ಗೋಮಯ ದೀಪಾವಳಿ ಆಚರಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿಗೆ ಹಿಂದೂಪರ ಸಂಘಟನೆಗಳು ಮುಂದಾಗಿವೆ.

ABOUT THE AUTHOR

...view details