ಕರ್ನಾಟಕ

karnataka

ವಾಡಿಯಲ್ಲಿ ಸಿಮೆಂಟ್ ಕಾರ್ಖಾನೆಯ ಯಂತ್ರಕ್ಕೆ ಸಿಲುಕಿ ಕಾರ್ಮಿಕ ದುರ್ಮರಣ

By

Published : Oct 9, 2021, 7:32 AM IST

ವಾಡಿಯ ಸಿಮೆಂಟ್ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕಂಪನಿ ಹಿರಿಯಾಧಿಕಾರಿಗಳು ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

labour-dies-in-cement-factory-after-stuck-into-machine
ಸಿಮೆಂಟ್ ಕಾರ್ಖಾನೆಯಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ದುರ್ಮರಣ

ಕಲಬುರಗಿ: ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವ ದುರ್ಘಟನೆ ಚಿತ್ತಾಪುರ ತಾಲೂಕಿನ ವಾಡಿಯ ಎಸಿಸಿ ನ್ಯೂ ಪ್ಲ್ಯಾಂಟ್​​ನಲ್ಲಿ ನಡೆದಿದೆ. ಇಂಗಳಗಿ ಗ್ರಾಮದ ಸುಭಾಷ್ ರಾಠೋಡ್ (51) ಮೃತ ಕಾರ್ಮಿಕ ಎಂದು ತಿಳಿದುಬಂದಿದೆ.

ಗುತ್ತಿಗೆ ಕಾರ್ಮಿಕ ಸುಭಾಷ್ ರಾಠೋಡ್, ಮೊನ್ನೆ ರಾತ್ರಿ ಕೆಲಸಕ್ಕೆ ಹಾಜರಾಗಿದ್ದರು. ಗೂಡ್ಸ್ ರೈಲಿಗೆ ಸಿಮೆಂಟ್ ಚೀಲಗಳ ಲೋಡಿಂಗ್ ಮಾಡುತ್ತಿದ್ದ ವೇಳೆ ಬೆಲ್ಟ್ ಮತ್ತು ಯಂತ್ರಕ್ಕೆ ಸಿಲುಕಿ ಬಳಿಕ ಸುಮಾರು 25 ಅಡಿ ಎತ್ತರದಿಂದ ಬಿದ್ದಿದ್ದಾನೆ. ಈ ವೇಳೆ ತಲೆಗೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಕಾರ್ಮಿಕನ ಸಾವಿನ ಬಳಿಕ ಕಂಪನಿ ವಿರುದ್ಧ ಕಾರ್ಮಿಕರು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರು. ನಂತರ ಕಂಪನಿಯ ಹಿರಿಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಇದನ್ನೂ ಓದಿ:ಕಲಬುರಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 340 ಕೆಜಿ ಗಾಂಜಾ ಜಪ್ತಿ, ಮೂವರ ಬಂಧನ

ABOUT THE AUTHOR

...view details