ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ‌ ಮತ್ತೆ ಹರಿದ ನೆತ್ತರು: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಬರ್ಬರ ಹತ್ಯೆ - kalburagi murder,

ಕಲಬುರಗಿ ನಗರದಲ್ಲಿ ಲ್ಯಾಬ್ ಲ್ಯಾಬ್ ಟೆಕ್ನಿಷಿಯನ್ ಅನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಒಂದರ ಹಿಂದೆ ಒಂದು ಕೊಲೆಗಳು ನಡೆಯುತ್ತಿರುವುದು ಜನರನ್ನು ಬೆಚ್ಚಿಬೀಳಿಸಿದೆ.

Lab Technician killed in Kalburgi
ಲ್ಯಾಬ್ ಟೆಕ್ನಿಷಿಯನ್ ಹತ್ಯೆ

By

Published : Jul 3, 2021, 1:18 PM IST

ಕಲಬುರಗಿ : ಲ್ಯಾಬ್ ಟೆಕ್ನಿಷಿಯನ್‌ ಅನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ‌ ಇಲ್ಲಿನ ಕನಕ ನಗರದಲ್ಲಿ ನಡೆದಿದೆ. ಅಪ್ಪಾ ಸಾಹೇಬ್ (32) ಕೊಲೆಯಾದ ವ್ಯಕ್ತಿ. ಸಂಗಮನಾಥ ಕಾಲೋನಿ ನಿವಾಸಿಯಾಗಿದ್ದ ಈತ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.

ನಿನ್ನೆ ರಾತ್ರಿ ಬೈಕ್​ನಲ್ಲಿ ಕನಕ ನಗರದ ಖಾಸಗಿ ಶಾಲೆಯ ಪಕ್ಕದಲ್ಲಿ ಹೋಗುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಆರ್. ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ‌ ಪೊಲೀಸರು ಬಲೆ ಬಿಸಿದ್ದಾರೆ.

ಓದಿ : ದಾವಣಗೆರೆಯಲ್ಲಿ 3 ವರ್ಷದ ಕಂದಮ್ಮನೊಂದಿಗೆ ಕಾನ್ಸ್​ಟೇಬಲ್ ಪತ್ನಿ​ ಆತ್ಮಹತ್ಯೆ

ಕಳೆದ ಒಂದು ತಿಂಗಳ ಜಿಲ್ಲೆಯಲ್ಲಿ ನಡೆದ ಎಂಟನೇ ಕೊಲೆ ಇದಾಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.

ABOUT THE AUTHOR

...view details