ಫೆಬ್ರವರಿ 25ರಂದು ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲಾ ಪ್ರವಾಸ - ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲೆ ಪ್ರವಾಸ
ಯುವ ನಾಯಕ ಬಾಲರಾಜ್ ಗುತ್ತೇದಾರ್ ಸೇರಿದಂತೆ ವಿವಿಧ ಪಕ್ಷ ತೊರೆದು ಬರಲಿರುವ ಅನೇಕ ನಾಯಕರನ್ನು ಕುಮಾರಸ್ವಾಮಿ ಬರಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಗೆಲುವಿಗಾಗಿ ಕಾರ್ಯಚಟುವಟಿಕೆ ಆರಂಭಿಸಲಿದ್ದಾರೆ..
![ಫೆಬ್ರವರಿ 25ರಂದು ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲಾ ಪ್ರವಾಸ kumarswamy to visits kalburgi](https://etvbharatimages.akamaized.net/etvbharat/prod-images/768-512-10742625-4-10742625-1614070564453.jpg)
ಫೆ. 25 ರಂದು ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲೆ ಪ್ರವಾಸ
ಕಲಬುರಗಿ :ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠಗೊಳಿಸಲು ಫೆಬ್ರವರಿ 25ರಂದು ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
ಹೆಚ್‌ಡಿಕೆ ಪ್ರವಾಸದ ಕುರಿತಂತೆ ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಹೇಳಿಕೆ..
ಯುವ ನಾಯಕ ಬಾಲರಾಜ್ ಗುತ್ತೇದಾರ್ ಸೇರಿದಂತೆ ವಿವಿಧ ಪಕ್ಷ ತೊರೆದು ಬರಲಿರುವ ಅನೇಕ ನಾಯಕರನ್ನು ಕುಮಾರಸ್ವಾಮಿ ಬರಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಗೆಲುವಿಗಾಗಿ ಕಾರ್ಯಚಟುವಟಿಕೆ ಆರಂಭಿಸಲಿದ್ದಾರೆ.
ಫೆ.25ರಂದು ಮಾಜಿ ಸಿಎಂ ಕುಮಾರಸ್ವಾಮಿ ಕಲಬುರಗಿ ಜಿಲ್ಲೆ ಪ್ರವಾಸ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಹೊಸ ಶಕ್ತಿ ತುಂಬುವ ಮೂಲಕ ಬರುವ ವಿಧಾನಸಭಾ ಚುನಾವಣೆಗೆ ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಲಿದ್ದಾರೆ. ಇದರೊಂದಿಗೆ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಜೆಡಿಎಸ್ ರಾಜ್ಯಧ್ಯಕ್ಷರು ಆದ ಮಾಜಿ ಸಿಎಂ ಕುಮಾರಸ್ವಾಮಿ ರಣಕಹಳೆ ಊದಲಿದ್ದಾರೆ.
ಸೇಡಂ ಪಟ್ಟಣದ ಬೃಹತ್ ಸಮಾವೇಶದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಸೇರಿ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದ್ದಾರೆ.