ಕರ್ನಾಟಕ

karnataka

ETV Bharat / state

ಕಲಬುರಗಿ: ಸೇತುವೆಯಿಂದ ನದಿಗೆ ಉರುಳಿ ಬಿದ್ದ ಸಾರಿಗೆ ಬಸ್ - ಬಸ್ ಎಕ್ಸಲ್ ಕಟ್ ಆಗಿ ಅವಘಡ

ಕಲಬುರಗಿಯಲ್ಲಿ ಜೇವರ್ಗಿಯಿಂದ ಚಿತ್ತಾಪುರಕ್ಕೆ ಹೊರಟಿದ್ದ ಬಸ್ ಶಹಾಬಾದ್ ಬಳಿ ಕಾಗಿಣಾ ನದಿಗೆ ಉರುಳಿದ ಬಿದ್ದ ಘಟನೆ ಜರುಗಿದೆ.

ksrtc-bus-fell-into-kagina-river-in-shahabad-kalaburagi
ಕಲಬುರಗಿ: ಸೇತುವೆಯಿಂದ ನದಿಗೆ ಉರುಳಿ ಬಿದ್ದ ಸಾರಿಗೆ ಬಸ್... ತಪ್ಪಿದ ಅನಾಹುತ

By

Published : Nov 3, 2022, 7:59 PM IST

Updated : Nov 3, 2022, 8:28 PM IST

ಕಲಬುರಗಿ:ನದಿ ಸೇತುವೆಯಿಂದ ಸಾರಿಗೆ ಬಸ್ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಅನೇಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಶಹಾಬಾದ್ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಕಲಬುರಗಿ: ಸೇತುವೆಯಿಂದ ನದಿಗೆ ಉರುಳಿ ಬಿದ್ದ ಸಾರಿಗೆ ಬಸ್... ತಪ್ಪಿದ ಅನಾಹುತ

ಚಿತ್ತಾಪುರ ಮತ್ತು ಶಹಾಬಾದ್ ಮಾರ್ಗದಲ್ಲಿರುವ ಕಾಗಿಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮೇಲ್ಸೇತುವೆ ಮೇಲೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕೆಳಕ್ಕೆ ಉರುಳಿ ಬಿದ್ದಿದೆ. ಜೇವರ್ಗಿಯಿಂದ ಚಿತ್ತಾಪುರಕ್ಕೆ ಹೊರಟಿದ್ದ ಬಸ್ ಎಕ್ಸಲ್ ಕಟ್ ಆಗಿ ಅವಘಡ ನಡೆದಿದೆ ಎನ್ನಲಾಗಿದೆ.

ಕಲಬುರಗಿ: ಸೇತುವೆಯಿಂದ ನದಿಗೆ ಉರುಳಿ ಬಿದ್ದ ಸಾರಿಗೆ ಬಸ್... ತಪ್ಪಿದ ಅನಾಹುತ

ಅದೃಷ್ಟವಷಾತ್ ಸೇತುವೆ ಆರಂಭದಲ್ಲೇ ಬಸ್ ಉರುಳಿದೆ. ಹೀಗಾಗಿ ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಬಸ್​ನಲ್ಲಿದ್ದ ಎಲ್ಲರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಶಹಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಆಟೋಗೆ ಲಾರಿ ಡಿಕ್ಕಿ: ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಐವರ ಸಾವು

Last Updated : Nov 3, 2022, 8:28 PM IST

ABOUT THE AUTHOR

...view details