ಕಲಬುರಗಿ: ರಾಜ್ಯದಲ್ಲಿ ತೀವ್ರ ಬರಗಾಲವಿರುವಾಗ ಶಾಸಕರು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕರವೇ ಕಾರ್ಯಕರ್ತರು ಪತ್ರ ಚಳವಳಿ ನಡೆಸಿದರು.
ರೆಸಾರ್ಟ್ ರಾಜಕಾರಣ ಖಂಡಿಸಿ ಕರವೇ ಕಾರ್ಯಕರ್ತರಿಂದ ಪತ್ರ ಚಳವಳಿ - ಕಲಬುರಗಿ, ಕರವೇ ಕಾರ್ಯಕರ್ತರಿಂದ ಪ್ರತಿಭಟನೆ, ಪತ್ರ ಚಳವಳಿ, ರೆಸಾರ್ಟ್ ರಾಜಕಾರಣದ ವಿರುದ್ದ ಪ್ರತಿಭಟನೆ, ಕನ್ನಡ ವಾರ್ತೆ, ಈ ಟಿವಿ ಭಾರತ
ರಾಜ್ಯದಲ್ಲಿ ತೀವ್ರ ಬರವಿರುವಾಗ ಅದನ್ನು ನಿಭಾಯಿಸಬೇಕಾದ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮನಬಂದಂತೆ ವರ್ತಿಸುತ್ತಿರುವ ಶಾಸಕರ ನಡೆಯಿಂದ ರಾಜ್ಯದ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಕಲಬುರಗಿಯಲ್ಲಿ ಕರವೇ ಕಾರ್ಯಕರ್ತರಿಂದ ಪತ್ರ ಚಳವಳಿ ನಡೆಯಿತು.
ಕರವೇ ಕಾರ್ಯಕರ್ತರಿಂದ ಪತ್ರ ಚಳವಳಿ ನಡೆಯಿತು
ನಗರದ ರೈಲ್ವೆ ನಿಲ್ದಾಣದ ಬಳಿಯ ಅಂಚೆ ಕಚೇರಿ ಮುಂದೆ ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ರಾಜ್ಯಪಾಲರಿಗೆ ಪತ್ರ ರವಾನಿಸಿದರು. ರಾಜ್ಯದಲ್ಲಿ ತೀವ್ರ ಬರವಿರುವಾಗ ಅದನ್ನು ನಿಭಾಯಿಸಬೇಕಾದ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಮನಬಂದಂತೆ ವರ್ತಿಸುತ್ತಿರುವ ಶಾಸಕರ ನಡೆಯಿಂದ ರಾಜ್ಯದ ವ್ಯವಸ್ಥೆ ಹದಗೆಟ್ಟಿದೆ. ರೆಸಾರ್ಟ್ ರಾಜಕಾರಣದಲ್ಲಿ ತೊಡಗಿರುವ ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಪತ್ರದ ಮೂಲಕ ಒತ್ತಾಯಿಸಿದರು.
TAGGED:
Kalburgi