ಕಲಬುರಗಿ:ಜಿಲ್ಲೆಯಲ್ಲಿ ಇಂದು 97 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದಲ್ಲದೇ 99 ಜನರು ಈ ದಿನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಲಬುರಗಿ: 97 ಜನರಿಗೆ ಸೋಂಕು, ಓರ್ವನ ಸಾವು - ಕಲಬುರಗಿಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ
ಕಲಬುರಗಿ ಜಿಲ್ಲೆಯಲ್ಲಿ ಇವತ್ತು ಹೊಸದಾಗಿ 97 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,737 ಆಗಿದೆ.
ಓರ್ವ ಸೋಂಕಿತ ಸಾವು
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17,099 ಆಗಿದೆ. ಗುಣಮುಖರಾದವರ ಸಂಖ್ಯೆ 14,085 ಏರಿಕೆಯಾಗಿದೆ. ಸೋಂಕಿನಿಂದ ಮತ್ತೋರ್ವ ಮೃತಪಟ್ಟಿರುವುದು ಇಂದಿನ ಕೊರೊನಾ ವರದಿಯಿಂದ ದೃಢಪಟ್ಟಿದ್ದು, ಮೃತರ ಸಂಖ್ಯೆ 277 ಕ್ಕೆ ಏರಿಕೆಯಾಗಿದೆ. 2737 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ನೀಡಲಾಗುತ್ತಿದೆ.