ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸುಪ್ರಸಿದ್ಧ ಪಂಡರಾಪುರದಲ್ಲಿ ನಡೆಯುವ 'ಕಾರ್ತಿಕ ವರಿ' ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಕ್ತಾದಿಗಳು ತೆರಳದಂತೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ಯಾ ಸೂಚಿಸಿದ್ದಾರೆ.
ಕೋವಿಡ್ ಭೀತಿ: ಪಂಡರಾಪುರದ 'ಕಾರ್ತಿಕ ವರಿ' ಕಾರ್ಯಕ್ರಮಕ್ಕೆ ತೆರಳದಂತೆ ನಿರ್ಬಂಧಿಸಿ ಡಿಸಿ ಆದೇಶ - Pandharpur 'Kartik Vari' program
ಕೋವಿಡ್-19 ಹರಡುವ ಭೀತಿ ಹಿನ್ನೆಲೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸುಪ್ರಸಿದ್ಧ ಪಂಡರಾಪುರದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಕ್ತಾದಿಗಳು ತೆರಳದಂತೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ಯಾ ಆದೇಶಿಸಿದ್ದಾರೆ.
ವಿವಿ ಜೋತ್ಸ್ಯಾ
ಆದ ಕಾರಣ ಜಿಲ್ಲೆಯಿಂದ ಪಂಡರಾಪುರ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಪಲ್ಲಕ್ಕಿ, ನಂದಿಕೋಲು, ಪಾದಯಾತ್ರೆ ಮೂಲಕ ತೆರಳುತ್ತಿದ್ದವರು ಈ ಬಾರಿ ಕಾರ್ಯಕ್ರಮ ರದ್ದಾದ ಹಿನ್ನೆಲೆ ಪಂಡರಾಪುರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ. ಕಾರ್ತಿಕ ವರಿ ಹಿನ್ನೆಲೆ ಕರ್ನಾಟಕ ಸೇರಿದಂತೆ ಅನ್ಯ ರಾಜ್ಯಗಳಿಂದ ಪ್ರತಿ ವರ್ಷ ಐದು ಲಕ್ಷಕ್ಕೂ ಅಧಿಕ ಜನರು ಸೇರುತ್ತಾರೆ.
Last Updated : Nov 23, 2020, 8:48 PM IST