ಕಲಬುರಗಿ/ಸೇಡಂ:ಏಪ್ರಿಲ್ 19 ರಂದು ನಡೆಯಬೇಕಿದ್ದ ಇಲ್ಲಿನ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಈಗಾಗಲೇ ಮುಂದೂಡಲಾಗಿದೆ. ಆದರೆ ಭೂಸನೂರ ಗ್ರಾಮ ಹಾಗೂ ರಾವೂರಲ್ಲಿ ನಡೆದ ಜಾತ್ರೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ದೇವಾಲಯವನ್ನು ಸೀಲ್ಡೌನ್ ಮಾಡಲಾಗಿದೆ.
ಸೇಡಂ ಕೊತ್ತಲ ಬಸವೇಶ್ವರ ಜಾತ್ರೆ ರದ್ದು; ದೇವಾಲಯ ಸೀಲ್ ಡೌನ್ - ಸೀಲ್ಡೌನ್
ಪ್ರತಿವರ್ಷದಂತೆ ನಡೆಯಬೇಕಾಗಿದ್ದ ಕೊತ್ತಲ ಬಸವೇಶ್ವರ ಜಾತ್ರೆಯನ್ನು ಕೊರೊನಾ ಭೀತಿ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಕೊರೊನಾ ಮಹಾಮಾರಿಯಿಂದ ವಿಶ್ವವನ್ನು ರಕ್ಷಿಸುವಂತೆ ಕೋರಿ ನಾಳೆ ಬೆಳಗ್ಗೆ ನಡೆಯುವ ಬಸವೇಶ್ವರನ ಪೂಜೆಯಲ್ಲಿ ಕೋರಲಾಗುತ್ತದೆ. ಈ ಬಾರಿಯೂ ಕೊತ್ತಲ ಬಸವೇಶ್ವರ ಜೀವ ಸಂಕುಲ ರಕ್ಷಿಸಲಿದ್ದಾನೆ ಎಂದು ಸದಾಶಿವ ಸ್ವಾಮೀಜಿ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ನಾಳೆ ಸೇಡಂನ ಕೊತ್ತಲ ಬಸವೇಶ್ವರ ಜಾತ್ರೆ: ದೇವಾಯಲಕ್ಕೆ ಸಂಪೂರ್ಣ ಸೀಲ್ ಡೌನ್
ಜಾತ್ರೆ ನಡೆಸುವುದಿಲ್ಲ ಎಂದು ದೇವಾಲಯದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಹೇಳಿಕೆ ನೀಡಿದ್ದರೂ, ಜನ ಆಗಮಿಸುವ ಸಾಧ್ಯತೆ ಇರುವುದರಿಂದ ಸಂಪೂರ್ಣ ದೇವಾಲಯವನ್ನು ಬಂದ್ ಮಾಡಲಾಗಿದೆ.
ದೇವಾಲಯದ ಐದೂ ಪ್ರವೇಶ ದ್ವಾರಗಳನ್ನು ಬಂದ್ ಮಾಡಿ ಕಾವಲು ಹಾಕಲಾಗಿದೆ. ಜಾತ್ರೆ ನಡೆಸಲ್ಲ ಎಂದು ಭಕ್ತರಿಗೆ ಮನವರಿಕೆ ಮಾಡಲಾಗಿದೆ. ಅಲ್ಲದೆ ಯಾವುದೇ ರೀತಿಯ ನೈವೇದ್ಯ ತರದಂತೆ ಸಹ ಸೂಚಿಸಲಾಗಿದೆ. ಕೇವಲ 4 ಜನ ಸೇರಿ ಬೆಳಗ್ಗೆ ಕೊತ್ತಲ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಲಾಗುವುದು ಎಂದು ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.