ಕಲಬುರಗಿ: ಇದೇ 21ರಂದು ಸೂರ್ಯಗ್ರಹಣ ಸಂಭವಿಸುವ ಹಿನ್ನೆಲೆ ಮೂಢನಂಬಿಕೆ ಆಚರಣೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಗ್ರಹಣ ಎಂದು ಮಕ್ಕಳನ್ನು ತಿಪ್ಪೆಗುಂಡಿಲಿ ಹೂತಿಟ್ಟರೆ... ಹುಷಾರ್...! : ಡಿಸಿ ವಾರ್ನಿಂಗ್
ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಹೂತಿಟ್ಟರೆ ಸರಿ ಹೋಗುತ್ತಾರೆ ಎಂಬ ಮೂಢನಂಬಿಕೆ ಇಂದಿಗೂ ಜನರಲ್ಲಿದೆ. ಆದ್ರೆ ಈ ಬಾರಿ ಆ ರೀತಿಯ ನಂಬಿಕೆ ಆಚರಿಸಿದರೆ ಪ್ರಕರಣ ದಾಖಲಾಗುತ್ತದೆ.
ವಿಶೇಷ ಚೇತನ ಹಾಗೂ ಬುದ್ಧಿಮಾಂದ್ಯ ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಹೂತಿಟ್ಟರೆ ಸರಿ ಹೋಗುತ್ತಾರೆ ಎಂಬ ಮೂಢನಂಬಿಕೆ ಇಂದಿಗೂ ಜನರಲ್ಲಿದೆ. ಕಳೆದ ಸೂರ್ಯಗ್ರಹಣದ ವೇಳೆ ನಗರದ ಹೊರವಲಯದ ತಾಜಸುಲ್ತಾನಪುರ ಗ್ರಾಮದಲ್ಲಿ ವಿಶೇಷ ಚೇತನ, ಬುದ್ದಿಮಾಂದ್ಯ ಮಕ್ಕಳನ್ನು ಕುತ್ತಿಗೆವರೆಗೆ ತಿಪ್ಪೆಗುಂಡಿಯಲ್ಲಿ ಪೋಷಕರು ಹುತಿಟ್ಟಿದ್ದರು. ಇದು ದೇಶದಾದ್ಯಂತ ಸುದ್ದಿಯಾಗಿ ತಲೆ ತಗ್ಗಿಸುವಂತಾಗಿತ್ತು.
ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಯಾವುದೇ ಕಾರಣಕ್ಕೂ ಮೂಢನಂಬಿಕೆ ಆಚರಣೆ ಮಾಡಕೂಡದು. ಮಕ್ಕಳನ್ನು ಮಣ್ಣಲ್ಲಿ ತಿಪ್ಪೆಗುಂಡಿಯಲ್ಲಿ ಕುತ್ತಿಗೆವರೆಗೆ ಹೂತಿಟ್ಟರೆ ಅಂತ ಪೋಷಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.