ಕಲಬುರಗಿ : ಪ್ರತಿಷ್ಟಿತ ಇಎಸ್ಐ ಆಸ್ಪತ್ರೆಯಲ್ಲಿ ದಿನಗೂಲಿ ನೌಕರರ ಸೇವೆ ಮುಂದುವರೆಸದೆ ಅನ್ಯಾಯ ಎಸಗಲಾಗಿದೆ ಎಂದು ಇಎಸ್ಐ ಆಸ್ಪತ್ರೆ ದಿನಗೂಲಿ ನೌಕರರು ಆರೋಪಿಸಿದ್ದಾರೆ.
ಹಳೆಯ ನೌಕರರನ್ನು ಕೈಬಿಟ್ಟ ಇಎಸ್ಐ ಆಸ್ಪತ್ರೆ ಆಡಳಿತ ಮಂಡಳಿ - kannada news
ಇಎಸ್ಐ ಆಸ್ಪತ್ರೆ ದಿನಗೂಲಿ ನೌಕರರ ಸೇವೆ ಮುಂದುವರೆಸದೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದ ಆಸ್ಪತ್ರೆಯ ನೌಕರರು.
ಹಳೆಯ ನೌಕರರನ್ನು ಕೈಬಿಟ್ಟ ಇಎಸ್ಐ ಆಸ್ಪತ್ರೆ ಆಡಳಿತ ಮಂಡಳಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಭಗವಾನ್ ಬೋವಿ, ಒಂದು ಸಾವಿರ ನೌಕರರು ಕಳೆದ ಮೂರು ವರ್ಷಗಳಿಂದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಈಗ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ತೆಗೆದುಕೊಳ್ಳುತ್ತಿದ್ದು, ಹಳೆಯ ನೌಕರರನ್ನು ಕೈಬಿಡಲಾಗುತ್ತಿದೆ. ಅಲ್ಲದೆ ಕೆಲಸ ಕೊಡುವಾಗ ನೌಕರರ ಬಳಿ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಈ ಹಿಂದೆ ಕೆಲಸ ಮಾಡಿದವರನ್ನೇ ಸೇವೆಯಲ್ಲಿ ಮುಂದುವರೆಸಬೇಕೆಂದು ಅವರು ಆಗ್ರಹಿಸಿದರು.