ಕಲಬುರಗಿ: ಜಾತ್ಯಾತೀತ ಪಕ್ಷಗಳು ಒಂದುಗೂಡಿ ಉಪ ಚುನಾವಣೆ ಎದುರಿಸೋದು ಒಳ್ಳೆಯದು ಎಂದು ಎಐಸಿಸಿ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಗೆ ಒಲವು ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ.. - ಉಪ ಚುನಾವಣೆ
ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಜಾತ್ಯಾತೀಯ ಶಕ್ತಿಗಳು ಒಂದುಗೂಡುವ ಅವಶ್ಯಕತೆ ಇದೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಜಾತ್ಯಾತೀತ ಪಕ್ಷಗಳ ಮುಖಂಡರ ಜತೆ ಕುಳಿತು ಮಾತಾಡೋದು ಸರಿಯೆನ್ನಿಸುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಖರ್ಗೆ ಒಲವು ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಗೆ ಒಲವು ವ್ಯಕ್ತಪಡಿಸಿದ ಖರ್ಗೆ
ಕಲಬುರ್ಗಿಯಲ್ಲಿ ಮಾತನಾಡಿದ ಅವರು, ತಕ್ಷಣಕ್ಕೆ ಉಪ ಚುನಾವಣೆ ಬರುತ್ತದೆಂದು ನಿರೀಕ್ಷಿಸಿರಲಿಲ್ಲ. ಇದೀಗ ದಿನಾಂಕ ಘೋಷಣೆಯಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಜಾತ್ಯಾತೀಯ ಶಕ್ತಿಗಳು ಒಂದುಗೂಡುವ ಅವಶ್ಯಕತೆ ಇದೆ. ಉಪ ಚುನಾವಣೆಗೆ ಸಂಬಂಧಿಸಿ ಜಾತ್ಯಾತೀತ ಪಕ್ಷಗಳ ಮುಖಂಡರ ಜೊತೆ ಕುಳಿತು ಮಾತಾಡೋದು ಸರಿಯನ್ನಿಸುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಖರ್ಗೆ ಒಲವು ವ್ಯಕ್ತಪಡಿಸಿದ್ದಾರೆ.ಜೊತೆಗೆ ಈ ಸಂಬಂಧ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ. ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ತೇವೆ ಎಂದು ತಿಳಿಸಿದ್ದಾರೆ.
Last Updated : Sep 21, 2019, 7:46 PM IST