ಕರ್ನಾಟಕ

karnataka

ETV Bharat / state

ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ - Kalaburagi latest news

ಅ. 1ಕ್ಕೆ ಈಗಾಗಲೆ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಅ. 8 ಕೊನೆ ದಿನವಾಗಿದೆ. ನಾಮಪತ್ರಗಳನ್ನು ಅ. 1 ರಿಂದ 8ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯ ಕಾನ್ಫೆರೆನ್ಸ್ ಸಭಾಂಗಣ, 2 ಮಹಡಿ ಮಿನಿ ವಿಧಾನಸೌಧದಲ್ಲಿ ಸಲ್ಲಿಸಬಹುದು.

Karnataka northeast teachers constituency is set for election
ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್

By

Published : Oct 5, 2020, 8:55 PM IST

ಕಲಬುರಗಿ: ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯನ್ನು ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು ಕೋವಿಡ್ ಹಿನ್ನೆಲೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ತಿಳಿಸಲಾಗಿದೆ ಎಂದರು.

ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ಜಿಲ್ಲೆಯಲ್ಲಿ 28, ಬೀದರ್​ನಲ್ಲಿ 34, ಕಲಬುರಗಿಯಲ್ಲಿ 41, ಯಾದಗಿರಿಯಲ್ಲಿ 7, ಕೊಪ್ಪಳದಲ್ಲಿ 20 ಹಾಗೂ ರಾಯಚೂರು ಜಿಲ್ಲೆಯಲ್ಲಿ 17 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಬಳ್ಳಾರಿಯಲ್ಲಿ 2 ಮತ್ತು ಬೀದರ್​ನಲ್ಲಿ 1 ಆಕ್ಸಿಲರಿ ಮತಗಟ್ಟೆ ಸೇರಿ ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆಗೆ ಒಟ್ಟು 147 ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದರು. 17,285 ಪುರುಷರು, 8,747 ಮಹಿಳಾ ಮತದಾರರು ಹಾಗೂ ಇತರರು ಒಬ್ಬರು ಸೇರಿದಂತೆ ಆರು ಜಿಲ್ಲೆಗಳಿಂದ ಒಟ್ಟು 26,033 ಮತದಾರರಿದ್ದಾರೆ ಎಂದು ತಿಳಿಸಿದರು.

ಮೆರವಣಿಗೆ ಇಲ್ಲ ಅವಕಾಶ;

ಅಭ್ಯರ್ಥಿಗಳಾಗಲಿ ಅಥವಾ ರಾಜಕೀಯ ಪಕ್ಷಗಳಾಗಲಿ ಯಾವುದೇ ಮೆರವಣಿಗೆ ಮಾಡುವಂತಿಲ್ಲ ಎಂದು ತಿಳಿಸಿದ ಅವರು, ಸಭೆ-ಸಮಾರಂಭಗಳನ್ನು ನಡೆಸಬೇಕಾದಲ್ಲಿ ಆಯಾ ಜಿಲ್ಲೆಯ ಸಹಾಯಕ ಚುನಾವಣಾಧಿಕಾಗಳೂ ಆದ ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.

ಅ. 1ಕ್ಕೆ ಈಗಾಗಲೆ ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಅ. 8 ಕೊನೆ ದಿನವಾಗಿದೆ. ನಾಮಪತ್ರಗಳನ್ನು ಅ. 1 ರಿಂದ 8ರ ವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪ್ರಾದೇಶಿಕ ಆಯುಕ್ತರ ಕಚೇರಿಯ ಕಾನ್ಫೆರೆನ್ಸ್ ಸಭಾಂಗಣ, 2 ಮಹಡಿ ಮಿನಿ ವಿಧಾನಸೌಧದಲ್ಲಿ ಸಲ್ಲಿಸಬಹುದು.

ಸ್ವೀಕೃತ ನಾಮಪತ್ರಗಳ ಪರಿಶೀಲನಾ ಕಾರ್ಯ ಅ. 9 ರಂದು ನಡೆಯಲಿದ್ದು. ನಾಮಪತ್ರ ಹಿಂದಕ್ಕೆ ಪಡೆಯಲು ಅ. 12 ಕೊನೆಯ ದಿನವಾಗಿರುತ್ತದೆ. ಅ. 28 ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ನ. 2 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ವೇಳಾಪಟ್ಟಿ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿಂದಿನಿಂತೆಯೇ ನೀತಿ-ಸಂಹಿತೆ ಜಾರಿಯಲ್ಲಿರಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ನೀತಿ-ಸಂಹಿತೆಯನ್ನು ಪಾಲನೆ ಮಾಡುವಂತೆ ಸೂಚಿಸಿದರು.

ABOUT THE AUTHOR

...view details