ಕರ್ನಾಟಕ

karnataka

ETV Bharat / state

ಬಹುಮತ ಸಾಬೀತು ಪಡಿಸಿದ ಬಿಎಸ್​ವೈ... ತೆಲಂಗಾಣದಲ್ಲೂ ವಿಜಯೋತ್ಸವ! - ವಿಕರಾಬಾದ್​ ಜಿಲ್ಲೆಯಲ್ಲಿ ಬಿಜೆಪಿ ವಿಜಯೋತ್ಸವ

ಬಿಎಸ್​ವೈ ಬಹುಮತ ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲೂ ವಿಜಯೋತ್ಸವ ಆಚರಿಸಲಾಯಿತು.

ತೆಲಂಗಾಣದಲ್ಲೂ ವಿಜಯೋತ್ಸವ!

By

Published : Jul 30, 2019, 8:14 AM IST

ಕಲಬುರಗಿ: ಸದನದಲ್ಲಿ ಸಿ ಎಂ ಬಿಎಸ್ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ ಹಿನ್ನೆಲೆ ತೆಲಂಗಾಣದಲ್ಲಿ ಕೂಡ ಬಿಜೆಪಿ ಕಾರ್ಯಕರ್ತರು ಹಾಗೂ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ವಿಕರಾಬಾದ್​ ಜಿಲ್ಲೆಯ ತಾಂಡೂರ ಭಾವಿಗಿ ಭದ್ರೇಶ್ವರ ಮಂದಿರ ಹತ್ತಿರ ತಾಂಡೂರು ಪಟ್ಟಣದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಲ್ಲಾಮಾಮಿಡಿ ಬಾಲರಾಜ್ ನೇತೃತ್ವದಲ್ಲಿ ಪಟಾಕಿ ಹಚ್ಚಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

ತೆಲಂಗಾಣದಲ್ಲೂ ವಿಜಯೋತ್ಸವ!

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡರು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಮತದಾರರು ಗೆಲ್ಲಿಸಿದರು. ಆದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು14 ತಿಂಗಳ ಕಾಲ ಅಧಿಕಾರ ನಡೆಸಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡದೆ ರಾಜಕೀಯ ಕಿತ್ತಾಟ ನಡೆಸಿದ್ದಾರೆ. ಈಗ ಕರ್ನಾಟಕದಲ್ಲಿ ಜನರ ನಿರೀಕ್ಷೆಯಂತೆ ಬಿ.ಎಸ್.ವೈ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗಿದ್ದು ಅನುಕೂಲವಾಗಿದೆ ಎಂದರು.

ABOUT THE AUTHOR

...view details