ಕಲಬುರಗಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5ರಂದು ಕರೆ ನೀಡಲಾದ ಕರ್ನಾಟಕ ಬಂದ್ಗೆ ಕಲಬುರಗಿಯಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರ: ಏಕಾಏಕಿ ಬಂದ್ ಕರೆಗೆ ಕೆಲ ಸಂಘಟನೆಗಳ ವಿರೋಧ - ಮರಾಠಿ ಅಭಿವೃದ್ದಿ ನಿಗಮ ಸ್ಥಾಪನೆ ವಿರೋಧಿಸಿ ಡಿಸೆಂಬರ್ 5ರಂದು ಕರೆ
ರಾಜ್ಯದ ಯಾವ ಜಿಲ್ಲೆಯ ನಾಯಕರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ಕುಳಿತು ಏಕಾಏಕಿ ಬಂದ್ಗೆ ಕರೆ ಕೊಡ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ನೆಪವನ್ನಾಗಿಟ್ಟುಕೊಂಡು ಧೀಡಿರ್ ಬಂದ್ ಕರೆ ನೀಡುವುದು ಸರಿಯಲ್ಲ ಎಂದು ಕೆಲ ಕನ್ನಡಪರ ಸಂಘಟನೆ ಮುಖಂಡರು ಹೇಳಿದ್ದಾರೆ.
ರಾಜ್ಯದ ಯಾವ ಜಿಲ್ಲೆಯ ನಾಯಕರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ಕುಳಿತು ಏಕಾಏಕಿ ಬಂದ್ಗೆ ಕರೆ ಕೊಡ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ನೆಪವನ್ನಾಗಿಟ್ಟುಕೊಂಡು ಧೀಡಿರ್ ಬಂದ್ ಕರೆ ನೀಡುವುದು ಸರಿಯಲ್ಲ. ಎಲ್ಲರೊಂದಿಗೆ ಚರ್ಚಿಸಿ ಬಂದ್ ಕರೆ ನೀಡಿದ್ರೆ ಒಳ್ಳಯದು ಎಂದು ಕೆಲ ಕನ್ನಡಪರ ಸಂಘಟನೆ ಮುಖಂಡರು ಹೇಳಿದ್ದಾರೆ.
ಮಾರಾಠ ಸಮುದಾಯದವರು ಬಹಳ ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿದ್ದಾರೆ. ಮರಾಠಿ ಭಾಷೆಗೂ, ಅಭಿವೃದ್ಧಿ ಪ್ರಾಧಿಕಾರಕ್ಕೂ ಸಂಬಂಧವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಬಂದ್ಗೆ ಕರೆ ನೀಡಿದ್ದರೆ ಬಂದ್ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಹಾಗೂ ಇನ್ನಿತರ ಸಂಘಟನೆ ಮುಖಂಡರು ಎಚ್ಚರಿಸಿದ್ದಾರೆ.
TAGGED:
ಮರಾಠಿ ಅಭಿವೃದ್ದಿ ನಿಗಮ ಸ್ಥಾಪನೆ