ಸೇಡಂ: ಮಳೆ ಅವಾಂತರದಿಂದ ನಷ್ಟ ಅನುಭವಿಸಿದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕರವೇ ವತಿಯಿಂದ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಯಿತು.
ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕರವೇ ಒತ್ತಾಯ
ಈ ಬಾರಿ ಸೇಡಂ ತಾಲೂಕಿನಲ್ಲಿ ಊಹೆಗೂ ಮೀರಿದ ಮಳೆಯಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ಹಾನಿಯಾಗಿದೆ. ಹೀಗಾಗಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕರವೇ ಒತ್ತಾಯಿಸಿದೆ.
ಈ ಬಾರಿ ತಾಲೂಕಿನಲ್ಲಿ ಊಹೆಗೂ ಮೀರಿದ ಮಳೆಯಾಗಿದೆ. ಇದರಿಂದ ಸಾವಿರಾರು ಎಕರೆ ಕೃಷಿ ಭೂಮಿ ಹಾನಿಯಾಗಿದ್ದು, ಸಾಲ ಮಾಡಿ ಬೆಳೆ ಬೆಳೆದ ರೈತರ ಪಾಲಿಗೆ ಮಳೆರಾಯ ನಷ್ಟವನ್ನುಂಟು ಮಾಡಿದ್ದಾನೆ. ಜೊತೆಗೆ ನದಿ ಪಾತ್ರದ ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಕೂಡಲೇ ಸರ್ಕಾರ ಈ ಕುರಿತು ಸರ್ವೇ ನಡೆಸಿ ರೈತರ ನೆರವಿಗೆ ಬರಬೇಕು. ನಷ್ಟ ಅನುಭವಿಸಿದ ರೈತರ ಪ್ರತೀ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಮತ್ತು ಮನೆ ಕಳೆದುಕೊಂಡವರಿಗೆ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಂತರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಅಧ್ಯಕ್ಷ ಅಂಬರೀಶ ಊಡಗಿ, ಅನೀಲ ಹಳಿಮನಿ, ಸತೀಶ ದುಧನಿ, ಆರಿಫ ಖಾನ್, ಚನ್ನವೀರ ಬೆಂಕಿ, ರವಿ ಚಿನ್ನ ರಾಠೋಡ, ಶಿವರಾಜ ಪಾಟೀಲ, ಅನಂತು ಹುಳಗೋಳ, ದಿನೇಶ ನಾಮವಾರ, ಹಣಮಂತ ಹೊಕ್ಕಳ, ಅಡವಿ ತಾತ ಹಂಗನಹಳ್ಳಿ, ಫಿರೋಜ್ ಬೀನಹಳ್ಳಿ, ಮಹ್ಮದ ತೈಬರ್, ಸುರೇಶ ಬೋಸ್ಲೆ, ಅಶೋಕ ಗುತ್ತೇದಾರ ಇನ್ನಿತರರು ಇದ್ದರು.