ಕಲಬುರಗಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ ಸೇರಿದ ಬಸ್ಗಳಿಗೆ ಮಸಿ ಬಳಿಯಲಾಗಿತ್ತು. ಇದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಬಸ್ಗಳಿಗೆ ಕಪ್ಪು ಮಸಿ ಬಳಿದು ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ: ಬಸ್ಗೆ ಕಪ್ಪು ಮಸಿ ಬಳಿದು ಕನ್ನಡಿಗರ ಆಕ್ರೋಶ - maharashtra bus with black ink
ಮಹಾರಾಷ್ಟ್ರಕ್ಕೆ ಸೇರಿದ ಬಸ್ ತಡೆದು ಮಸಿ ಬಳಿಯುವ ಮೂಲಕ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರಕ್ಕೆ ಸೇರಿದ ಬಸ್ ತಡೆದು ಮಸಿ
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಬಸ್ ತಡೆದು ಮಸಿ ಬಳಿದಿದ್ದಾರೆ. ಬಸ್ ಮುಂಭಾಗದ ಗ್ಲಾಸ್ಗೆ ಬಿತ್ತಿ ಪತ್ರ ಅಂಟಿಸಿ ಪ್ರತಿಭಟಿಸಲಾಯಿತು. ಮಹಾರಾಷ್ಟ್ರ ವಿರುದ್ಧ ಧಿಕ್ಕಾರ ಕೂಗಿ, ಅಲ್ಲಿ ಪುಂಡರು ಪುಂಡಾಟಿಕೆ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಕೊಲ್ಲಾಪುರದಲ್ಲಿ ಸಿಎಂ ಬೊಮ್ಮಾಯಿ ಅಣಕು ಶವಯಾತ್ರೆ: ಶಿವಸೇನೆ ಕಾರ್ಯಕರ್ತರ ನಡೆಗೆ ಆಕ್ರೋಶ
Last Updated : Nov 25, 2022, 7:53 PM IST