ಕರ್ನಾಟಕ

karnataka

ETV Bharat / state

ಕನ್ನಡಕ್ಕೆ 'ಕವಿರಾಜ ಮಾರ್ಗ' ಕೊಟ್ಟಿದ್ದು ಸೇಡಂನ ನೆಲ: ರಾಜಕುಮಾರ ಪಾಟೀಲ ತೇಲ್ಕೂರ...

ಕನ್ನಡ ನಮ್ಮ ತಾಯ್ನಾಡಿನ ಕೀರ್ತಿ, ಮನಸ್ಸಿನ ಪ್ರೀತಿಯಿಂದ ಬರುವಂತಹ ಭಾಷೆಯಾಗಿದೆ. ಪ್ರತಿಯೊಬ್ಬರೂ ಈ ನೆಲದ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

kannada rajyotsava celebration at sedam
ಸೇಡಂನಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭ

By

Published : Nov 1, 2020, 8:02 PM IST

ಸೇಡಂ: ಕನ್ನಡ ಭಾಷೆಗೆ ಮೊದಲ ಲಾಕ್ಷಣಿಕ ಗ್ರಂಥ ಕವಿರಾಜ ಮಾರ್ಗ ಕೊಟ್ಟಿದ್ದು ಸೇಡಂನ ನೆಲ ಎಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ಸೇಡಂನ ಸುವರ್ಣ ಕರ್ನಾಟಕ ಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾವನೆಯ ಭಾಷೆ ಕನ್ನಡವಾಗಿದೆ. ಕನ್ನಡ ಬಲ್ಲವನು ವಿಶ್ವದ ಯಾವ ಮೂಲೆಯಲ್ಲೂ ಸಹ ಬದುಕಬಹುದು ಎಂದು ತಿಳಿಸಿದರು.

ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿದರು

ಕನ್ನಡ ಭಾಷೆ ಬಲ್ಲವನಿಗೆ ತನ್ನದೇ ಆದ ಆತ್ಮಬಲ ಇರಲಿದೆ. ಆಂಗ್ಲ ಭಾಷೆಗಳು ಕೇವಲ ವ್ಯಾವಹಾರಿಕವಾಗಿ ಬಳಕೆಯಾಗುತ್ತದೆ. ಕನ್ನಡ ನಮ್ಮ ತಾಯ್ನಾಡಿನ ಕೀರ್ತಿ, ಮನಸ್ಸಿನ ಪ್ರೀತಿಯಿಂದ ಬರುವಂತಹ ಭಾಷೆಯಾಗಿದೆ. ಪ್ರತಿಯೊಬ್ಬರೂ ಈ ನೆಲದ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕು ಜೊತೆಗೆ ಭಾಷೆಯ ಶಕ್ತಿಯನ್ನು ಹೊರ ರಾಜ್ಯದವರಿಗೆ ಪರಿಚಯಿಸಬೇಕು ಎಂದರು.

ತಹಶೀಲ್ದಾರ್​ ಬಸವರಾಜ ಬೆಣ್ಣೆಶಿರೂರ, ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯಕುಮಾರ ಬಾಗೋಡಿ, ತಾಲೂಕು ಆರೋಗ್ಯಾಧಿಕಾರಿ ಸುರೇಶ ಮೇಕಿನ್, ವೆಂಕಟೇಶ, ಡಾ. ಮುರಳಿಧರ ದೇಶಪಾಂಡೆ, ಕಸಾಪ ಅಧ್ಯಕ್ಷ ಅನೀಲ ಸಕ್ರಿ, ಮಣಿಸಿಂಗ ಚವ್ಹಾಣ್​, ಅಮೋಘಪ್ಪ ವಗ್ಗಿ ವೇದಿಕೆಯಲ್ಲಿದ್ದರು.

ABOUT THE AUTHOR

...view details