ಕಲಬುರಗಿ:ಕಲಬುರಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ಯಶಸ್ವಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದ್ದಾರೆ.
ಅಕ್ಷರ ಜಾತ್ರೆ ಆಭೂತಪೂರ್ವ ಯಶಸ್ಸು ಕಂಡಿದೆ: ವೀರಭದ್ರ ಸಿಂಪಿ - ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ಯಶಸ್ವಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಕ್ಷರ ಜಾತ್ರೆ ಆಭೂತಪೂರ್ವ ಯಶಸ್ಸು ಕಂಡಿದೆ: ವೀರಭದ್ರ ಸಿಂಪಿ
ಇಂದು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನದ ಯಶಸ್ಸಿಗೆ ಜನತೆಯ ಬೆಂಬಲ ಕಾರಣ. ಜಿಲ್ಲಾಧಿಕಾರಿ ಶರತ್ ಬಿ. ಮುತುವರ್ಜಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಹಕಾರವೂ ಯಶಸ್ಸಿನ ಹಿಂದಿದೆ.
ಮೂರೂ ದಿನಗಳ ಕಾಲ ಲಕ್ಷಾಂತರ ಜನ ಬಂದರೂ ಸಹ ಯಾರಿಗೂ ತೊಂದರೆಯಾಗಿಲ್ಲ. ಶ್ರೀವಿಜಯ ಹುಟ್ಟಿದ ನೆಲದಲ್ಲಿ ಯಶಸ್ಸಿನ ಗುಣವಿದೆ ಎಂದರು. ಇನ್ನು ಲೇಖಕರ ಚರ್ಚಾ ಕಟ್ಟೆ ಈ ಬಾರಿಯ ಸಮ್ಮೇಳನದ ವಿಶೇಷವಾಗಿತ್ತು. 21 ಸಾವಿರ ಜನ ಪ್ರತಿನಿಧಿಗಳ ನೋಂದಣಿಯಾಗಿತ್ತು. ದಾಖಲೆ ಪ್ರಮಾಣದಲ್ಲಿ ಪುಸ್ತಕಗಳು ಮಾರಾಟವಾಗಿವೆ ಎಂದು ವೀರಭದ್ರ ಸಿಂಪಿ ಸಂತಸ ವ್ಯಕ್ತಪಡಿಸಿದರು.