ಕರ್ನಾಟಕ

karnataka

ETV Bharat / state

ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದಿಂದ ಪ್ರತಿಭಟನೆ

ಕಲಬುರಗಿಯ ಸರ್ದಾರ್ ಪಟೇಲ್ ವೃತ್ತದಲ್ಲಿನ ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

kn_klb_01_Kannada_Flag_Protest_ka10021
ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ, ಕನ್ನಡ ಸೈನ್ಯದಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

By

Published : Jan 27, 2020, 1:20 PM IST

ಕಲಬುರಗಿ:ಇಲ್ಲಿನ ಸರ್ದಾರ್ ಪಟೇಲ್ ವೃತ್ತದಲ್ಲಿನ ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ ಖಂಡಿಸಿ ಕನ್ನಡ ಸೈನ್ಯದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡ ಧ್ವಜ ಕಟ್ಟೆ ಧ್ವಂಸ ಪ್ರಕರಣ: ಕನ್ನಡ ಸೈನ್ಯದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಹೈದರಾಬಾದ್ ಪ್ರಾಂತ್ಯದ ವಿಮೋಚನೆಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಶರಣಗೌಡ ಇನಾಂದಾರ್ ಸ್ಥಾಪಿಸಿದ್ದ ಧ್ವಜ ಕಟ್ಟೆಯನ್ನು ಪಾಲಿಕೆ ಸಿಬ್ಬಂದಿ ಧ್ವಂಸ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕನ್ನಡ ಧ್ವಜ ಕಟ್ಟೆ ಧ್ವಂಸ ಮಾಡಿ ಕನ್ನಡ ವಿರೋಧಿ ನೀತಿ ತಳೆದಿದ್ದಾರೆ. ಕೂಡಲೇ ಧ್ವಜ ಕಟ್ಟೆ ಧ್ವಂಸಗೊಳಿಸಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ಸ್ಥಳದಲ್ಲಿ ಹೊಸ ಧ್ವಜ ಕಟ್ಟೆ ನಿರ್ಮಿಸಿ, ಕನ್ನಡ ಧ್ವಜ ಹಾರಲು ಅವಕಾಶ ಮಾಡಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ABOUT THE AUTHOR

...view details