ಕರ್ನಾಟಕ

karnataka

ETV Bharat / state

ಕಲ್ಯಾಣ ಕರ್ನಾಟಕದ ಜನಪರ ಹೋರಾಟಗಾರ ಮಾರುತಿ ಮಾನ್ಪಡೆ ಇನ್ನಿಲ್ಲ... - ಹೋರಾಟಗಾರ ಮಾರುತಿ ಮನ್ಪಡೆ

ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯ ರೈತ ಮತ್ತು ಕಾರ್ಮಿಕರ ಪರ ಅನೇಕ ಹೋರಾಟ ಮಾಡಿದ್ದ ಮಾರುತಿ ಮಾನ್ಪಡೆ ಇಂದು ವಿಧಿವಶರಾಗಿದ್ದಾರೆ.

Maruti Manpade
ಹೋರಾಟಗಾರ ಮಾರುತಿ ಮನ್ಪಡೆ

By

Published : Oct 20, 2020, 1:36 PM IST

ಕಲಬುರಗಿ: ಕಲ್ಯಾಣ ಕರ್ನಾಟಕದ ಹಿರಿಯ ಜನಪರ ಹೋರಾಟಗಾರ ಮಾರುತಿ ಮಾನ್ಪಡೆ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ. ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ (65) ಕೊರೊನಾ ಸೋಂಕಿನಿಂದಲೂ ಬಳಲುತ್ತಿದ್ದರು.

ಮೊದಲನೇ ದಿನ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಮಹಾರಾಷ್ಟ್ರದ ಸೋಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ರಿಪೋಟ್೯ ನೆಗೆಟಿವ್ ಬಂದಿದ್ದರೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಜನಪರ ಹೋರಾಟದಲ್ಲಿ ಮಾರುತಿ ಮಾನ್ಪಡೆ

ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯ ರೈತ ಮತ್ತು ಕಾರ್ಮಿಕರ ಪರ ಅನೇಕ ಹೋರಾಟ ಮಾಡಿದ್ದರು. ಹೋರಾಟದ ಹಾದಿಯಲ್ಲಿಯೇ ಕಮಲಾಪುರದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೇ ಸಲ್ಲಿಸಿದ್ದರು. ಅಲ್ಲದೆ ಹಲವು ಬಾರಿ ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು.

ಮೃತರ ಅಂತ್ಯಕ್ರಿಯೆ ಕಮಲಾಪುರ ತಾಲೂಕಿನ ಲೆಂಗಟಿ ಗ್ರಾಮದಲ್ಲಿ ನಡೆಯಲಿದೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details