ಕಲ್ಯಾಣ ಕರ್ನಾಟಕದ ಪೊಲೀಸ್ ಹುದ್ದೆಗಳು ಬೇರೆಡೆಗೆ ವರ್ಗ.. ಎಂ ಎಸ್ ಪಾಟೀಲ ನರಿಬೋಳ ಆಪಾದನೆ - ಕಲ್ಯಾಣ ಕರ್ನಾಟಕದ ಪೊಲೀಸ್ ಹುದ್ದೆಗಳ ವರ್ಗಾವಣೆ ಆರೋಪ ಸುದ್ದಿ
14 ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಬೇರೆಡೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಹುದ್ದೆಗಳನ್ನು ಕಿತ್ತುಕೊಂಡಂತಾಗುತ್ತದೆ. ರಾಜ್ಯ ಸರ್ಕಾರದಿಂದ ಪದೇಪದೆ ಈ ಭಾಗಕ್ಕೆ ಅನ್ಯಾಯ ನಡೆಯುತ್ತಿದೆ..
![ಕಲ್ಯಾಣ ಕರ್ನಾಟಕದ ಪೊಲೀಸ್ ಹುದ್ದೆಗಳು ಬೇರೆಡೆಗೆ ವರ್ಗ.. ಎಂ ಎಸ್ ಪಾಟೀಲ ನರಿಬೋಳ ಆಪಾದನೆ kalyana karnataka police jobs tranfer alligations](https://etvbharatimages.akamaized.net/etvbharat/prod-images/768-512-8874082-292-8874082-1600611795828.jpg)
ಎಂ.ಎಸ್.ಪಾಟೀಲ ನರಿಬೋಳ ಆರೋಪ
ಕಲಬುರಗಿ: ಕಲ್ಯಾಣ ಕರ್ನಾಟಕದ ಪೊಲೀಸ್ ಹುದ್ದೆಗಳನ್ನು ಬೇರೆಡೆಗೆ ವರ್ಗ ಮಾಡಿ ಹಿಂದುಳಿದ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಆರೋಪಿಸಿದೆ.
ಎಂ ಎಸ್ ಪಾಟೀಲ್ ನರಿಬೋಳ ಆರೋಪ
14 ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಬೇರೆಡೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಹುದ್ದೆಗಳನ್ನು ಕಿತ್ತುಕೊಂಡಂತಾಗುತ್ತದೆ. ರಾಜ್ಯ ಸರ್ಕಾರದಿಂದ ಪದೇಪದೆ ಈ ಭಾಗಕ್ಕೆ ಅನ್ಯಾಯ ನಡೆಯುತ್ತಿದೆ. ಕೂಡಲೇ ಇಲ್ಲಿಯ ಇನ್ಸ್ಪೆಕ್ಟರ್ ಹುದ್ದೆಗಳನ್ನು ಈ ಭಾಗದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದ್ರು.