ಕರ್ನಾಟಕ

karnataka

ETV Bharat / state

ಕಲ್ಯಾಣ-ಮುಂಬೈ ಕರ್ನಾಟಕದ ಭಾಗಕ್ಕೆ ತಲಾ ನಾಲ್ಕೈದು ಮಂತ್ರಿ ಸ್ಥಾನ: ಮಲ್ಲಿಕಾರ್ಜುನ ಖರ್ಗೆ - Inauguration of the new Parliament House

ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

By

Published : May 22, 2023, 3:19 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ:ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಭಾಗಕ್ಕೆ ತಲಾ ನಾಲ್ಕೈದು ಮಂತ್ರಿ ಸ್ಥಾನಗಳು ಸಿಗಲಿವೆ ಅಂತ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವು ಕರ್ನಾಟಕ ಜನತೆಯ ಗೆಲುವು. ಈ ಭ್ರಷ್ಟ ಸರ್ಕಾರ ತೆಗೆದುಹಾಕಲು ಜ‌ನ ಈ ನಿರ್ಧಾರ ಕೈಗೊಂಡಿದ್ದರು. ಅದರ ಫಲ ನಮಗೆ ಬಹುಮತ ಸಿಕ್ಕಿದೆ. ಚುನಾವಣೆ ವೇಳೆ ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದಿದ್ದಾರೆ.

ಪ್ರಣಾಳಿಕೆಯ ಗ್ಯಾರಂಟಿ ಘೋಷಣೆಗಾಗಿ ಸಿಎಂ, ಡಿಸಿಎಂ ಹುದ್ದೆ ಜೊತೆಗೆ ಕನಿಷ್ಠ ಸಂಖ್ಯೆಯ ಮಂತ್ರಿಗಳ ಸ್ಥಾನ ಅಗತ್ಯವಿತ್ತು. ಹೀಗಾಗಿ ಕೆಲವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಕಲ್ಯಾಣ ಕರ್ನಾಟಕಕ್ಕೆ ಇನ್ನೂ ನಾಲ್ಕೈದು ಮಂತ್ರಿ ಸ್ಥಾನ, ಅದರಂತೆ ಮುಂಬೈ ಕರ್ನಾಟಕ ಭಾಗಕ್ಕೂ ನಾಲ್ಕೈದು ಸಚಿವ ಸ್ಥಾನ ಸಿಗಲಿದೆ. ಸಿಎಂ, ಡಿಸಿಎಂ ಮಂತ್ರಿಗಳು ಸೇರಿ ಐದು ಗ್ಯಾರಂಟಿಗಳು ಈಗಾಗಲೇ ಅನುಷ್ಠಾನ ಘೋಷಣೆ ಮಾಡಿರೋದು ಸ್ವಾಗತಾರ್ಹ ವಿಷಯ. ಆದ್ರೆ ಫಲಾನುಭವಿಗಳು ಯಾರು? ಅವರಿಗೆ ಹೇಗೆ ಕೊಡಬೇಕು ಅನ್ನೋದು ಶೀಘ್ರವೇ ನಿರ್ಧರಿಸಿ ಪ್ರಕಟಿಸುವುದಾಗಿ ಹೇಳಿದರು.

ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ: ಇನ್ನು ಕರ್ನಾಟಕ ಫಲಿತಾಂಶ ಬರುವ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುವ ವಿಷಯವಾಗಿ ಮಾತನಾಡಿದ ಖರ್ಗೆ, ರಾಜ್ಯದ ಜನರ ಈ ತೀರ್ಮಾನ ನೋಡಿದ್ರೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲೂ ನಮಗೆ ಬಹುಮತ ಬರುತ್ತೆ. ಅದರಂತೆ ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಇವತ್ತು ದೆಹಲಿಯ ನನ್ನ ನಿವಾಸದಲ್ಲಿ ಪ್ರತಿಪಕ್ಷಗಳ ಸಮಾನ ಮನಸ್ಕರ ಸಭೆ ಕರೆದಿದ್ದೇನೆ. ಇಂದು ಶುಭ ಸೂಚನೆ ಸಿಗಲಿದೆ. ನಮಗೆ ಯಶಸ್ಸು ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ಇನ್ಮುಂದೆ 40 ಪರ್ಸೆಂಟ್ ಕಡಿಮೆ ಬಿಡ್ ಮಾಡಿ: ಬೊಮ್ಮಾಯಿ‌ ಸವಾಲು

ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಯಾಕೆ ಕರೆಸ್ತಿಲ್ಲ: ಇದೇ ವೇಳೆ ನೂತನ ಸಂಸತ್ ಭವನ ಉದ್ಘಾಟನೆ ವಿಚಾರವಾಗಿ ಪ್ರಧಾನಿ‌ ಮೋದಿ ವಿರುದ್ಧ ಕಿಡಿಕಾರಿದ ಖರ್ಗೆ, ಅಡಿಗಲ್ಲು ಹಾಕಲು ಮೋದಿನೇ, ಉದ್ಘಾಟನೆಗೂ ಮೋದಿನೇ, ದೇಶದ ಲಾಂಛನ ಸಿಂಹ ಅಳವಡಿಕೆಗೂ ಮೋದಿನೇ ಬೇಕಾ?, ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ರೈಲು ಬಿಟ್ರಿ, ಮೋದಿ ಎಲ್ಲದಕ್ಕೂ ತಾನೇ ಅಂತಾರೆ, ಬರೀ ತೋರಿಸಲಿಕ್ಕೆ ಮಾಡಿದ್ರೆ ಏನ್ ಉಪಯೋಗ? ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರಿಗೆ ಕೊಡಬಾರದಾ? ಹಿಂದುಳಿದವರಿಗೆ ರಾಷ್ಟ್ರಪತಿ ಮಾಡಿದ್ದೀವಿ ಅಂತಿರಿ. ಆದ್ರೆ ಇಂತದ್ದಕ್ಕೆಲ್ಲಾ ನೀವೇ ಮುಂದಾಗ್ತಿರಿ. ಇದು ರಾಷ್ಟ್ರದ ಪ್ರತಿಷ್ಠೆಯ ಪ್ರಶ್ನೆ?. ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಯಾಕೆ ಕರೆಸ್ತಿಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ:ವಿಧಾನಸೌಧ ಮೊಗಸಾಲೆಯಲ್ಲಿ ಡಿಸಿಎಂ ಡಿಕೆಶಿ- ಬಿಜೆಪಿ ಶಾಸಕರ ಫ್ರೆಂಡ್‌ಶಿಪ್; ಪರಸ್ಪರ ಕೈ ಕುಲುಕಿ ಕುಶಲೋಪರಿ

ABOUT THE AUTHOR

...view details