ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲ ಆಡಿಯೋ ಪ್ರಕರಣ.. ವಿಚಾರಣೆ ಮುಂದೂಡಿದ ಕಲಬುರಗಿ ಹೈಕೊರ್ಟ್.. - ಆಪರೇಷನ್ ಕಮಲ ಆಡಿಯೋ ಪ್ರಕರ

ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ನೀಡಿರುವ ತಡೆಯಾಜ್ಞೆ ತೆರುವುಗೊಳಿಸುವಂತೆ ಸಲ್ಲಿಸಿದ ಮನವಿಯ ವಿಚಾರಣೆಗೆ ಕಲಬುರಗಿ ಹೈಕೊರ್ಟ್ ಪೀಠ ಎರಡು ವಾರಗಳ ಕಾಲಾವಕಾಶ ನೀಡಿದೆ. ಆಪರೇಷನ್ ಕಮಲದ ಆಮಿಷದ ಕುರಿತು ಯಾದಗಿರಿ ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ದಾಖಲಿಸಿದ ಪ್ರಕರಣಕ್ಕೆ ನೀಡಲಾದ ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಪಾಟೀಲ್ ಅರ್ಜಿ ಸಲ್ಲಿಸಿದ್ದರು.

ಆಪರೇಷನ್ ಕಮಲ ಆಡಿಯೋ ಪ್ರಕರಣ : ವಿಚಾರಣೆ ಮುಂದೂಡಿದ ಕಲಬುರಗಿ ಹೈಕೊರ್ಟ್

By

Published : Sep 17, 2019, 1:43 PM IST

ಕಲಬುರಗಿ: ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ನೀಡಿರುವ ತಡೆಯಾಜ್ಞೆ ತೆರುವುಗೊಳಿಸುವಂತೆ ಸಲ್ಲಿಸಿದ ಮನವಿಯ ವಿಚಾರಣೆಗೆ ಕಲಬುರಗಿ ಹೈಕೊರ್ಟ್ ಪೀಠ ಎರಡು ವಾರಗಳ ಕಾಲಾವಕಾಶ ನೀಡಿದೆ. ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನವೇ ಯಡಿಯೂರಪ್ಪ ಪರ ವಕೀಲರು ಸಮಯಾವಕಾಶ ಕೇಳಿದ ಹಿನ್ನಲೆ ಎರಡು ವಾರಗಳ ಕಾಲ ಸಮಯಾವಕಾಶ ನೀಡಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಆಪರೇಷನ್ ಕಮಲದ ಆಮಿಷದ ಕುರಿತು ಯಾದಗಿರಿ ಜಿಲ್ಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ದಾಖಲಿಸಿದ ಪ್ರಕರಣಕ್ಕೆ ನೀಡಲಾದ ತಡೆಯಾಜ್ಞೆ ತೆರವುಗೊಳಿಸುವಂತೆ ಶರಣಗೌಡ ಪಾಟೀಲ್ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ರವಿವರ್ಮಕುಮಾರ ಈಗಾಗಲೇ ವಾದ ಮಂಡನೆ ಕೂಡಾ ಮುಗಿಸಿದ್ದಾರೆ.ಇಂದು ಮತ್ತೆ ವಿಚಾರಣೆ ನಡೆಯಬೇಕಾಗಿತ್ತು. ಆದರೆ, ಯಡಿಯೂರಪ್ಪ ಪರ ವಕೀಲರು ಕಾಲಾವಕಾಶ ಕೇಳಿದ ಹಿನ್ನಲೆ ಹೈಕೋರ್ಟ್ ನ್ಯಾಯಾಧೀಶರು ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದ್ದಾರೆ.

ABOUT THE AUTHOR

...view details