ಕಲಬುರಗಿ: ಸಂಕ್ರಾಂತಿ ಪುಣ್ಯಸ್ನಾನ ಮುಗಿಸಿ ಮರಳುವಾಗ ಹೃದಯಾಘಾತದಿಂದ ಕಮಲಾಪೂರ ತಾಲೂಕಿನ ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು (58) ಲಿಂಗೈಕ್ಯರಾಗಿದ್ದಾರೆ.
ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಶಹಬಾದ ತಾಲೂಕಿನ ಹೊನಗುಂಟಾ ಗ್ರಾಮದ ಭೀಮಾ ಕಾಗಿನ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ನದಿಯಿಂದ ಹೊರಬರುವಾಗ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರ ಶಿಷ್ಯರು, ಸ್ಥಳೀಯರು ನದಿಯಿಂದ ಹೊರ ಕರೆತರುವಷ್ಟರಲ್ಲಿ ಶ್ರೀಗಳು ಇಹಲೋಕ ತ್ಯಜಿಸಿದ್ದರು ಎಂದು ಭಕ್ತ ಮೂಲಗಳಿಂದ ತಿಳಿದುಬಂದಿದೆ.