ಕಲಬುರಗಿ :ಇಂದು ದೇಶದಾದ್ಯಂತ ತೆರೆ ಕಾಣಲಿರುವ ದೀಪಿಕಾ ಪಡುಕೋಣೆ ನಟನೆಯ 'ಛಪಾಕ್' ಹಿಂದಿ ಚಿತ್ರ ವೀಕ್ಷಣೆಗೆ ಕಲಬುರಗಿಯ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ.
ಕಲಬುರಗಿ: 'ಛಪಾಕ್' ಸಿನಿಮಾದ ಟಿಕೆಟ್ ಬುಕ್ ಮಾಡಿದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು - ಚಾಪಕ್ ಸಿನಿಮಾದ ಟಿಕೆಟ್ ಬುಕ್ ಮಾಡಿದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು
ದೇಶದಾದ್ಯಂತ ಇಂದು ತೆರೆ ಕಾಣಲಿರುವ ದೀಪಿಕಾ ಪಡುಕೋಣೆ ನಟನೆಯ 'ಛಪಾಕ್' ಹಿಂದಿ ಚಿತ್ರ ವೀಕ್ಷಣೆಗೆ ಕಲಬುರಗಿಯ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ. ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ ಹಿಂದಿ ಚಿತ್ರ "ಛಪಾಕ್ " (Chhapaak) ಇಂದು ದೇಶದಾದ್ಯಂತ ಬಿಡುಗಡೆಯಾಗಿದೆ. ಯೂಥ್ ಕಾಂಗ್ರೆಸ್ ನಗರದ ಮಿರಜ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮಧ್ಯಾಹ್ನ 1 ಗಂಟೆ ಶೋನ ಎಲ್ಲಾ ಟಿಕೆಟ್ಗಳನ್ನು ಬುಕ್ ಮಾಡಿದ್ದಾರೆ. ಇದರೊಂದಿಗೆ ಆ‌್ಯಸಿಡ್ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಏಕಕಾಲಕ್ಕೆ ಸಿನಿಮಾ ನೋಡುವ ಮೂಲಕ 'ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಇದ್ದೇವೆ ಎನ್ನುವ ಸಂದೇಶ ಕೊಡುವುದರ ಜೊತೆಗೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಶಕ್ತಿ ಪ್ರದರ್ಶನ ಮಾಡುವುದಾಗಿದೆ' ಎಂದು ಬಣ್ಣಿಸಿದ್ದಾರೆ. ಅಲ್ಲದೇ ಜೆಎನ್ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಟ್ವೀಟ್ ಮಾಡಿದ್ದಾರೆ.