ಕಲಬುರಗಿ:ಜಿಲ್ಲೆಯತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಂಕ್ರಾಂತಿಯ ಸಿಹಿ ಸುದ್ದಿ ದೊರಕಿದೆ. ನಾಳೆಯಿಂದ ಕಲಬುರಗಿಯಿಂದ ತಿರುಪತಿಗೆ ಸ್ಟಾರ್ಏರ್ ವಿಮಾನ ಹಾರಾಟ ಆರಂಭಿಸುತ್ತಿದೆ.
ನಾಳೆಯಿಂದ ಕಲಬುರಗಿಯಿಂದ ತಿರುಪತಿಗೆ ವಿಮಾನ ಹಾರಾಟ ಆರಂಭ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇನ್ಮುಂದೆ ಜಿಲ್ಲೆಯ ಜನ ಹರಸಾಹಸ ಪಡಬೇಕಾದ ಅವಶ್ಯಕತೆ ಇಲ್ಲ. ನಾಳೆಯಿಂದ ವಿಮಾನ ಸೇವೆ ಲಭ್ಯವಾಗಲಿದೆ. ಆರಂಭಿಕವಾಗಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಹೀಗೆ ವಾರದಲ್ಲಿ ನಾಲ್ಕು ದಿನ ಸ್ಟಾರ್ಏರ್ ವಿಮಾನ ಜನರಿಗೆ ತನ್ನ ಸೇವೆ ನೀಡಲಿದೆ.
ತಿರುಪತಿ ಈಗ ತುಂಬಾ ಹತ್ತಿರ:
ಕಲಬುರಗಿಯಿಂದ ತಿರುಪತಿಗೆ ಹೋಗಲು 620 ಕಿ.ಮೀ ದೂರ. ಬಸ್, ರೈಲು ಮೂಲಕ ಸಂಚರಿಸಲು ಸುಮಾರು 11 ಗಂಟೆಗಳು ತಗುಲುತ್ತಿತ್ತು. ಆದರೀಗ ವಿಮಾನ ಸೇವೆಯಿಂದ ಕೇವಲ 1:05 ನಿಮಿಷದಲ್ಲಿ ತಿರುಪತಿಗೆ ತಲುಪಬಹುದಾಗಿದೆ. ಬೆಳಗ್ಗೆ 9:45 ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ತಿರುಪತಿಗೆ 1 ಗಂಟೆಯಲ್ಲಿ ಅಂದರೆ 11ಗಂಟೆಗೆ ತಲುಪಲಿದೆ. ಅಲ್ಲಿಂದ ವಾಪಸ್ ಮಧ್ಯಾಹ್ನ 2:25 ಕ್ಕೆ ತಿರುಪತಿಯಿಂದ ಕಲಬುರಗಿಗೆ ವಿಮಾನ ಹಾರಾಟ ಮಾಡಲಿದೆ. ಸ್ಟಾರ್ಏರ್ ತಿರುಪತಿಗೆ ಸೇವೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ 999ರೂ. ಆರಂಭಿಕ ಟಿಕೆಟ್ ಆಫರ್ ನೀಡುತ್ತಿದೆ.
ಓದಿ: ಹೈಕಮಾಂಡ್ ಭೇಟಿಗೆ ದೆಹಲಿಗೆ ಬಂದಿಳಿದ ಸಿಎಂ ಬಿಎಸ್ವೈ
ತಿಮ್ಮಪ್ಪ ಭಕ್ತರಿಗೆ ಹರ್ಷ:
ಐತಿಹಾಸಿಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಜಿಲ್ಲೆಯ ಭಾಗದ ಜನ ಹರಸಹಾಸ ಪಡಬೇಕಾಗಿತ್ತು. ಇದೀಗ ಸ್ಟಾರ್ಏರ್ ವಿಮಾನ ಸೇವೆ ಪ್ರಾರಂಭಿಸಿದ್ದರಿಂದ ಅತಿ ಕಡಿಮೆ ದರ ಹಾಗೂ ಕಡಿಮೆ ಸಮಯದಲ್ಲಿ ಆಯಾಸ ಪಡದೆ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಇದರಿಂದ ತಿಮ್ಮಪ್ಪ ಭಕ್ತರಿಗೆ ಅತೀವ ಸಂತೋಷ ಉಂಟಾಗಿದೆ.