ಕರ್ನಾಟಕ

karnataka

ETV Bharat / state

ಕಲಬುರಗಿ: ಬೈಕ್ ಕಳ್ಳರ ಬಂಧನ, 10 ಬೈಕ್​ಗಳು ಪೊಲೀಸ್​​ ವಶಕ್ಕೆ - Kalburgi crime news

ಕಲಬುರಗಿಯಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸ್ಟೇಷನ್​ ಬಜಾರ್ ಪೊಲೀಸರು ಬಂಧಿಸಿದ್ದಾರೆ. 4 ಲಕ್ಷ ರೂ. ಮೌಲ್ಯದ 10 ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಕ್ ಕಳ್ಳರ ಬಂಧನ
ಬೈಕ್ ಕಳ್ಳರ ಬಂಧನ

By

Published : Dec 21, 2020, 12:16 PM IST

ಕಲಬುರಗಿ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸ್ಟೇಷನ್​ ಬಜಾರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿ & ಟಿ ಕಾಲೋನಿ ನಿವಾಸಿ ರಘು ಕಟ್ಟಿಮನಿ (20) ಮತ್ತು ಡಬರಾಬಾದ್ ನಿವಾಸಿ ಉಮಾಕಾಂತ (20) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 4 ಲಕ್ಷ ರೂ. ಮೌಲ್ಯದ 10 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಲೈ 21 ರಂದು ಸಂಜೆ ಖುಬಾ ಪ್ಲಾಟ್ ಬಡಾವಣೆಯ ಕಲ್ಯಾಣಕರ್ ಬಿಲ್ಡಿಂಗ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ಬೈಕ್ ಕಳ್ಳರ ಪತ್ತೆಗೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ತಂಡ ರಚಿಸಿದ್ದರು. ನಿನ್ನೆ ಬೆಳಗ್ಗೆ ಜಿಡಿಎ ಲೇಔಟ್ ಬಳಿ ಅನುಮಾನಾಸ್ಪವಾಗಿ ತಿರುಗುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನವಾದ ಬೈಕ್​ಗಳು ಪತ್ತೆಯಾಗಿವೆ.

ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details