ಕರ್ನಾಟಕ

karnataka

ETV Bharat / state

ಮಾರುಕಟ್ಟೆಗೆ ತೆರಳಲು ಹಿಂಜರಿಯುವವರಿಗಾಗಿ ಬಂತು 'ಯು ಆರ್ ಕಾರ್ಟ್' ಆ್ಯಪ್​​​: ಕಲಬುರಗಿ ವಿದ್ಯಾರ್ಥಿಗಳ ಹೊಸ ಪ್ರಯತ್ನ - new marketing app

ಕೊರೊನಾ ಆತಂಕದಿಂದ ಹೊರಬರಲು ಆತಂಕ ಪಡುವವರಿಗೆ ಹಾಗೂ ಕೆಲಸದ ಒತ್ತಡದ ನಡುವೆ ಮಾರ್ಕೆಟ್​​​ಗೆ ಹೋಗಲಾಗದ ಗ್ರಾಹಕರಿಗೆ ಉಪಯುಕ್ತವಾಗಲಿ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೂಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಯು ಆರ್ ಕಾರ್ಟ್ ಎಂಬ ವಿನೂತನ ಮಾರ್ಕೆಟಿಂಗ್ ಆ್ಯಪ್​ ಬಿಡುಗಡೆ ಮಾಡಿದ್ದಾರೆ.

Kalburgi students invented a ''U R CART'' application
''ಯು ಆರ್ ಕಾರ್ಟ್'' ಆ್ಯಪ್​​​ ಕಂಡುಹಿಡಿದ ಕಲಬುರಗಿ ವಿದ್ಯಾರ್ಥಿಗಳು

By

Published : Oct 27, 2020, 1:17 PM IST

ಕಲಬುರಗಿ: ಕೋವಿಡ್ ಭೀತಿಯಿಂದ​​ ಹೊರಬರಲಾಗದೆ, ಮಾರುಕಟ್ಟೆಗೆ ತೆರಳಲು ಸಮಸ್ಯೆ ಎದುರಿಸುತ್ತಿರುವವರಿಗಾಗಿ ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸ ಮಾರ್ಕೆಟಿಂಗ್ ಆ್ಯಪ್ ಲಾಂಚ್ ಮಾಡಿದ್ದಾರೆ.

''ಯು ಆರ್ ಕಾರ್ಟ್'' ಆ್ಯಪ್​​​ ಕಂಡುಹಿಡಿದ ಕಲಬುರಗಿ ವಿದ್ಯಾರ್ಥಿಗಳು

ಈ ಕುರಿತು ಮಾತನಾಡಿದ ಆ್ಯಪ್ ಮುಖ್ಯಸ್ಥ ಅಮರೇಶ ಬಾಳೆ, ಜಿಲ್ಲೆಯ ಜನತೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ, ಕೊರೊನಾ ಆತಂಕದಿಂದ ಹೂರಬರಲಾಗದೆ ಸಮಸ್ಯೆ ಎದುರಿಸುತ್ತಿರುವವರಿಗೆ ಹಾಗೂ ಕೆಲಸದ ಒತ್ತಡದಲ್ಲಿರುವವರಿಗೆ ಮಾರ್ಕೆಟಿಂಗ್ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಇ-ಕಮರ್ಶಿಯಲ್​​​ ಅಪ್ಲಿಕೇಶನ್ (ಯು ಆರ್ ಕಾರ್ಟ್) ಎಂಬ ವಿನೂತನ ಮಾರ್ಕೆಟಿಂಗ್ ಆ್ಯಪ್​ ಬಿಡುಗಡೆ ಮಾಡಲಾಗಿದೆ‌. ಈ ಆ್ಯಪ್​​ನಿಂದಾಗಿ ಪ್ರತಿನಿತ್ಯದ ದಿನಬಳಕೆ ವಸ್ತುಗಳು, ದಿನಸಿ, ಬೇಕರಿ ಸಾಮಾನು, ಪೂಜಾ ಸಾಮಗ್ರಿ, ತರಕಾರಿ‌ ಮತ್ತು ಹಣ್ಣುಗಳನ್ನು ಗ್ರಾಹಕರ ಮನೆಗೆ ಅತಿ ವೇಗದಲ್ಲಿ ತಲುಪಿಸಲಾಗುವುದು ಎಂದು ತಿಳಿಸಿದರು.

ವ್ಯಾಪಾರಿಗಳಿಗೆ ಲಾಭದಾಯಕ:

ಯು ಆರ್ ಕಾಟ್೯ ಆ್ಯಪ್ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಸೇವೆ​ ನೀಡುತ್ತದೆ. ವ್ಯಾಪಾರಿಗಳ ಜೊತೆ ಕೈಜೋಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಾವು ಇಚ್ಛಿಸಿದ್ದೇವೆ‌. ಇದರಿಂದ ವ್ಯಾಪಾರಗಳಿಗೂ ಉತ್ತಮ ಲಾಭವಾಗಲಿದೆ ಎಂದು ಅಮರೇಶ ತಿಳಿಸಿದ್ದಾರೆ‌.

ABOUT THE AUTHOR

...view details