ಕಲಬುರಗಿ: ಬಿಸಿಲೂರು, ಶರಣರ ನಾಡು ಕಲಬುರಗಿಯಲ್ಲಿ ಶರಣಬಸವೇಶ್ವರರ ಭಕ್ತಿ ಭಾವ ಮೇಳೈಸಿದೆ. ಮಹಾದಾಸೋಹಿ ಶರಣಬಸವೇಶ್ವರರ ೨೦೦ನೇ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ವೈಭವದಿಂದ ಜರುಗಿತು. ಅಸಂಖ್ಯಾತ ಶರಣರ ಭಕ್ತರು ಮಹಾ ರಥೋತ್ಸವಕ್ಕೆ ಸಾಕ್ಷಿಯಾದರು.
ಶರಣಬಸವೇಶ್ವರರ ಸಂಸ್ಥಾನದ ಪಿಠಾಧಿಪತಿ ಚಿ. ದೊಡ್ಡಪ್ಪ ಅಪ್ಪಾ ಪರಶು ಬಟ್ಟಲು ಭಕ್ತರಿಗೆ ತೋರಿಸುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಬೀದಿಯಲ್ಲಿ ಮಹಾ ರಥೋತ್ಸವ ಸಾಗುತ್ತಿದ್ದಂತೆ ಭಕ್ತ ಸಮೂಹ ಖಾರಿಕು, ಬಾಳೆ ಹಣ್ಣು ಎಸೆದು ಶರಣ ಭಕ್ತಿ ಮೆರೆದರು. ತೇರು ಎಳೆಯುತ್ತಿದ್ದಂತೆ ಭಕ್ತರ ಬಾಯಲ್ಲಿ ಭಕ್ತಿಯಿಂದ ಶರಣಬಸವೇಶ್ವರರ ನಾಮಘೋಷ ಮೊಳಗಿತು.