ಕಲಬುರಗಿ:ಮುಂಬರುವ ಪಾಲಿಕೆ ಚುನಾವಣೆ ಮತ್ತು ಇತರ ಕಾರ್ಯಗಳ ಹಿನ್ನೆಲೆ ಕಲಬುರಗಿಯಲ್ಲಿ 100 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಲಾಯಿತು.
ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ರೌಡಿಗಳ ಪರೇಡ್... ಬಸ್ಕಿ ಹೊಡೆಸಿ ವಾರ್ನ್ ಮಾಡಿದ ಪೊಲೀಸರು - rowdy sheeters parade in kalburgi
ಕಲಬುರಗಿ ಪೊಲೀಸರು ಇಂದು ಜಿಲ್ಲೆಯ 100 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿದ್ದು, ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ರೌಡಿಗಳ ಪರೇಡ್
ನಗರದ ಮಿನಿವಿಧಾನಸೌಧ ಹಿಂಬದಿಯ ಎ ಡಿವಿಷನ್ ಕಚೇರಿ ಎದುರು ರೌಡಿಗಳಿಗೆ ಬಸ್ಕಿ ಹೊಡೆಸಿ ಪೊಲೀಸರು ವಾರ್ನ್ ಮಾಡಿದರು. ಎಸಿಪಿ ಅನ್ಷು ಕುಮಾರ್ ನೇತೃತ್ವದಲ್ಲಿ ನಗರದ ಆರ್.ಜೆ. ನಗರ, ಸ್ಟೇಷನ್ ಬಜಾರ್, ಬ್ರಹ್ಮಪುರ ಮತ್ತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 100 ಕ್ಕೂ ಹೆಚ್ಚು ರೌಡಿಗಳಿಗೆ ಪರೇಡ್ ನಡೆಸಲಾಯಿತು.
ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಇದೇ ವೇಳೆ ಖಡಕ್ ಎಚ್ಚರಿಕೆ ನೀಡಲಾಯಿತು.