ಕಲಬುರಗಿ:ಅಫಜಲಪುರ ತಾಲೂಕಿನ ಹಾವನೂರ ಗ್ರಾಮದಿಂದ ಡಿಸೆಂಬರ್ 5ರಂದು ಕಾಣೆಯಾಗಿದ್ದ ಬಾಲಕಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.
ಗ್ರಾಮದ ಹೊರವಲಯದ ಹಳ್ಳದ ಪಕ್ಕದ ಜಮಾದಾರ ಎನ್ನುವವರ ಹೊಲದಲ್ಲಿ ಬಾಲಕಿ 5 ವರ್ಷದ ಶ್ವೇತಾ ಶವ ಪತ್ತೆಯಾಗಿದೆ. ಬಾಲಕಿ ಕಾಣೆಯಾದ ಬಗ್ಗೆ ದೇವಲಗಾಣಗಾಪುರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಕಾಣೆಯಾದ 8 ದಿನಗಳ ಬಳಿಕ ಇವತ್ತು ಬಾಲಕಿ ಶ್ವೇತಾಳ ಅಸ್ಥಿಪಂಜರ, ಧರಿಸಿದ ಬಟ್ಟೆಗಳು ಪತ್ತೆಯಾಗಿವೆ.