ಕರ್ನಾಟಕ

karnataka

ETV Bharat / state

ನಾಳೆ ನಡೆಯಬೇಕಿದ್ದ ಕಲಬುರಗಿ ಮೇಯರ್ ಚುನಾವಣೆ ಮುಂದೂಡಿ ಹೈಕೋರ್ಟ್ ಆದೇಶ - ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ

ಬಿಜೆಪಿ ತನ್ನ ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿ‌ ಮೇಯರ್ ಗದ್ದುಗೆ ಹಿಡಿಯಲು ಪ್ಲ್ಯಾನ್ ರೂಪಿಸಿತ್ತು. ಆದರೆ, ಇದನ್ನು‌ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು..

Kalburgi High Court  Postponed  Kalburgi Corporation Mayor Election
ಮಹಾನಗರ ಪಾಲಿಕೆ ಚುನಾವಣೆ ಮುಂದೂಡಿ ಕಲಬುರಗಿ ಹೈಕೋರ್ಟ್ ಆದೇಶ

By

Published : Feb 4, 2022, 7:28 PM IST

ಕಲಬುರಗಿ :ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.‌ ಕಾಂಗ್ರೆಸ್ ರಿಟ್ ಅರ್ಜಿಯನ್ನು ಪುರಸ್ಕರಿಸಿದ ಕಲಬುರಗಿ ಹೈಕೋರ್ಟ್, ಹಳೆಯ ಮತದಾರರ ಪಟ್ಟಿಯನ್ವಯ ಚುನಾವಣೆ ನಡೆಸಲು ಸೂಚಿಸಿದೆ.

ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಪಿಟಿಷನ್ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಹೊಸದಾಗಿ ಸೇರ್ಪಡೆಯಾದ ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಕೈಬಿಟ್ಟು ಹಳೆಯ 63 ಮತದಾರರ ಸಂಖ್ಯೆಯ ಪಟ್ಟಿಯಂತೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದೆ.

ಮಾತ್ರವಲ್ಲ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಈ ಹಿಂದೆ ಘೋಷಿಸಲಾದ ಕೆಟಗರಿಯಂತೆ ಮುಂದಿನ ಒಂದು ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ.

ಕಲಬುರಗಿ ಮಹಾನಗರ ಪಾಲಿಕೆ 55 ವಾರ್ಡ್‌ಗಳನ್ನು ಒಳಗೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23 ಸ್ಥಾನಗಳಲ್ಲಿ ಜಯಗಳಿಸಿವೆ. ಜೆಡಿಎಸ್ 4 ಸ್ಥಾನದಲ್ಲಿ ಜಯಗಳಿಸಿದೆ. ಯಾವುದೇ ಪಕ್ಷ ಅಧಿಕಾರ ಹಿಡಿಯಲು 28 ಸದಸ್ಯ ಬಲದ ಅಗತ್ಯವಿದೆ.

ಸ್ವಂತ ಬಲದ ಮೇಲೆ ಯಾವುದೇ ಪಕ್ಷ ಮೇಯರ್ ಪಟ್ಟ ಪಡೆಯದಂತೆ ಅತಂತ್ರ ಫಲಿತಾಂಶ ಬಂದಿತ್ತು. ಹೀಗಾಗಿ, ಜೆಡಿಎಸ್ ಪಕ್ಷ ಇತರ ಪಕ್ಷಗಳಿಗೆ ಬೆಂಬಲ ನೀಡಲು ಮೇಯರ್ ಪಟ್ಟ ತನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿತ್ತು. ಇದಕ್ಕೆ ಕಾಂಗ್ರೆಸ್-ಬಿಜೆಪಿ ಇವೆರಡೂ ಪಕ್ಷಗಳಲ್ಲೂ ಒಪ್ಪಿಗೆ ಇರಲಿಲ್ಲ.

ಈ ಹಿನ್ನೆಲೆ ಬಿಜೆಪಿ ತನ್ನ ಐವರು ವಿಧಾನ ಪರಿಷತ್ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿ‌ ಮೇಯರ್ ಗದ್ದುಗೆ ಹಿಡಿಯಲು ಪ್ಲ್ಯಾನ್ ರೂಪಿಸಿತ್ತು. ಆದರೆ, ಇದನ್ನು‌ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲದೆ ಈ‌ ಮುಂಚೆ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನವು ಒಬಿಸಿಗೆ ನಿಗದಿಯಾಗಿತ್ತು. ಇದರಲ್ಲಿ ಯಾವುದೇ ಬದಲಾವಣೆ ಮಾಡದೆ ಚುನಾವಣೆ ನಡೆಸಲು ಹೈಕೋರ್ಟ್ ಸೂಚಿಸಿದೆ. ಇದರೊಂದಿಗೆ ಫೆ.5ರಂದು ನಿಗದಿಯಾಗಿದ್ದ ಮೇಯರ್ ಚುನಾವಣೆ ಮುಂದೂಡಿದಂತಾಗಿದೆ.

ಇದನ್ನೂ ಓದಿ: 73ನೇ ಗಣರಾಜ್ಯೋತ್ಸವ ಪರೇಡ್​: ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

ABOUT THE AUTHOR

...view details