ಕಲಬುರಗಿ: ಧಾರವಾಡ ನಗರದಲ್ಲಿ ಕಟ್ಟಡ ಕುಸಿತವಾದಾಗ 56 ಜನರ ಪ್ರಾಣ ರಕ್ಷಣೆಯಲ್ಲಿ ತಮ್ಮದೆಯಾದ ಸಾಹಸ ಧೈರ್ಯ ತೋರಿದ ಅಗ್ನಿಶಾಮಕದಳದ ಸಿಬ್ಬಂದಿ ಯಲ್ಲಪ್ಪ ಪೂಜಾರಿ ಅವರಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ ಒಲಿದು ಬಂದಿದೆ.
ಮೂಲತಃ ಕಲಬುರಗಿ ಜಿಲ್ಲೆಯ ಹಾಗರಗುಂಡಗಿ ಗ್ರಾಮದವರಾದ ಯಲ್ಲಪ್ಪ ಪೂಜಾರಿ ಕೃಷಿ ಕುಟುಂಬದಲ್ಲಿ ಜನಿಸಿ ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬಳ್ಳಾರಿಯ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಸುತ್ತಿದ್ದ ವೇಳೆ 2019ರಲ್ಲಿ ಧಾರವಾಡದ ಕರುಣೇಶ್ವರ ನಗರದಲ್ಲಿ ಬೃಹತ್ ಕಟ್ಟಡ ಕುಸಿದಿತ್ತು. ಕಟ್ಟಡದ ಅವಶೇಷಗಳಡಿ ಸಿಲುಕಿದ ಸುಮಾರು 56 ಜನರ ಪ್ರಾಣವನ್ನು ಉಳಿಸಿ ಯಲ್ಲಪ್ಪ ಸಾಹಸ ಮೆರೆದಿದ್ದರು. ಇವರ ಈ ಕಾರ್ಯ ಗುರುತಿಸಿ ಬಳ್ಳಾರಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಸ್.ರವಿಪ್ರಸಾದ್ ಅವರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಯಲ್ಲಪ್ಪ ಅವರ ಹೆಸರನ್ನು ಶಿಫಾರಸು ಮಾಡಿದ್ದರು.