ಕರ್ನಾಟಕ

karnataka

ETV Bharat / state

ಪ್ರವಾಹದಿಂದ ಬೀದಿಗೆ ಬಿದ್ದ ತೊಗರಿ ಬೆಳೆಗಾರರ ಬದುಕು: ಬೆಂಬಲ ಬೆಲೆಗೆ ರೈತರ ಒತ್ತಾಯ - ಪ್ರವಾಹದಿಂದ ತೊಗರಿ ಬೆಳೆ ಕಳೆದುಕೊಂಡ ಕಲಬುರಗಿ ರೈತರು

ಕಲಬುರಗಿ ಜಿಲ್ಲೆ ತೊಗರಿ ಕಣಜ ಅಂತಾನೆ ಪ್ರಸಿದ್ಧಿ ಪಡೆದಿದೆ. ಈ ಬಾರಿ ಪ್ರವಾಹದಿಂದಾಗಿ ಬೆಳೆಗಾರರು ಬೆಳೆ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದು, ಬೆಂಬಲ ಬೆಲೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಬಲ ಬೆಲೆ ನೀಡುವಂತೆ ರೈತರು ಒತ್ತಾಯ
Kalburgi toor dal farmers demanding to give support price for dal

By

Published : Jan 17, 2021, 12:36 PM IST

ಕಲಬುರಗಿ:ಭೀಮಾ ನದಿ ಪ್ರವಾಹದಿಂದ ತೊಗರಿ ಬೆಳೆ ಕಳೆದುಕೊಂಡು ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಇದೀಗ ಅಳಿದುಳಿದಿರುವ ತೊಗರಿ ಫಸಲಿಗೆ ಸೂಕ್ತ ಬೆಲೆ ಸಿಗದಿರುವುದು ಅನ್ನದಾತರನ್ನು ಮತ್ತಷ್ಟು ಹೈರಾಣಾಗಿಸಿದೆ.

ತೊಗರಿಗೆ ಬೆಂಬಲ ಬೆಲೆ ನೀಡುವಂತೆ ರೈತರ ಒತ್ತಾಯ

ತೊಗರಿ ಕಣಜವೆಂದೇ ಪ್ರಸಿದ್ಧಿ ಪಡೆದ ಕಲಬುರಗಿಯಲ್ಲಿ ಭೀಮಾ ನದಿ ಅಬ್ಬರಕ್ಕೆ ಶೇ.40ರಷ್ಟು ತೊಗರಿ ಬೆಳೆ ನಾಶವಾಗಿದೆ. ಅಳಿದುಳಿದ ತೊಗರಿ ಕಟಾವು ಮಾಡಿ ಮಾರಾಟಕ್ಕೆ ಮುಂದಾದರೂ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸರ್ಕಾರ ಕ್ವಿಂಟಲ್ ತೊಗರಿಗೆ 6 ಸಾವಿರ ರೂ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ಈವರೆಗೆ ಜಿಲ್ಲೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಅಲ್ಲದೆ ನೆರೆ, ಕೋವಿಡ್ ಕಾಟದಿಂದ ತೊಂದರೆಗೆ ಸಿಲುಕಿರುವ ಅನ್ನದಾತರು ಕ್ವಿಂಟಲ್ ತೊಗರಿಗೆ ಸರ್ಕಾರ 8 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅಮಿತ್‌ ಶಾ ಸ್ವಾಗತ ವಿಚಾರ: ಬೆಳಗಾವಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಗಲಾಟೆ

ಸೂಕ್ತ ಬೆಲೆ ಸಿಗದಿರುವುದಕ್ಕೆ ಕೋಪಗೊಂಡ ಅನ್ನದಾತರು ಕಷ್ಟಪಟ್ಟು ಬೆಳೆದ ಫಸಲನ್ನು ರಸ್ತೆಗೆ ಸುರಿದಿದ್ದಾರೆ. ಈ ಮೂಲಕ ಕ್ವಿಂಟಲ್‌ ತೊಗರಿಗೆ 8 ಸಾವಿರ ಬೆಲೆ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ABOUT THE AUTHOR

...view details