ಕರ್ನಾಟಕ

karnataka

ETV Bharat / state

ವ್ಯಾಕ್ಸಿನ್ ಪಡೆಯಲು ಒಪ್ಪದ ವಿಶೇಷ ಚೇತನ: ಕಲಬುರಗಿ ಜಿಲ್ಲಾಧಿಕಾರಿ ಮನವೊಲಿಸಿದ್ದು ಹೀಗೆ! - kalburgi dc V Jyotsna Convinced the disabled to take Vaccine

ವ್ಯಾಕ್ಸಿನ್ ಪಡೆಯಲು ಒಪ್ಪದ ವಿಶೇಷ ಚೇತನನ ಮನವೊಲಿಸಿ ಕಲಬುರಗಿ ಜಿಲ್ಲಾಧಿಕಾರಿ ಜ್ಯೋತ್ಸ್ನಾ ಲಸಿಕೆ ಕೊಡಿಸಿರುವ ಪ್ರಸಂಗ ಅಫಜಲಪುರ ತಾಲೂಕಿ‌ನ ಘತ್ತರಗಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

kalburgi dc  V Jyotsna Convinced the disabled to take Vaccine
ವ್ಯಾಕ್ಸಿನ್​ ಪಡೆಯುವಂತೆ ವಿಶೇಷ ಚೇತನನ ಮನವೊಲಿಸಿದ ಕಲಬುರಗಿ ಡಿಸಿ

By

Published : Jun 5, 2021, 5:15 PM IST

ಕಲಬುರಗಿ:ವ್ಯಾಕ್ಸಿನ್ ಪಡೆದರೆ ತೊಂದರೆಯಾಗುತ್ತದೆ ಎಂಬ ಹೆದರಿಕೆಯಿಂದ ಲಸಿಕೆ ಪಡೆಯದೇ ಹಟ ಹಿಡಿದು ಕುಳಿತ ವಿಶೇಷ ಚೇತನ ವ್ಯಕ್ತಿಯ ಮುಂದೆ ಸ್ವತ: ಜಿಲ್ಲಾಧಿಕಾರಿ ಕುಳಿತು ಆತನ ಮನವೊಲಿಸಿದ ಪ್ರಸಂಗ ನಡೆದಿದೆ.

ವ್ಯಾಕ್ಸಿನ್​ ಪಡೆಯುವಂತೆ ವಿಶೇಷ ಚೇತನನ ಮನವೊಲಿಸಿದ ಕಲಬುರಗಿ ಡಿಸಿ

ಅಫಜಲಪುರ ತಾಲೂಕಿ‌ನ ಘತ್ತರಗಾ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದ್ದು, 40 ಜನ ವಿಶೇಷ ಚೇತನರಿಗೆ ವ್ಯಾಕ್ಸಿನ್ ನೀಡಿ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ವಿ ಜ್ಯೋತ್ಸ್ನಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಕುಶಲೋಪರಿ ವಿಚಾರಿಸಿದರು. ಗ್ರಾಮದ ವಿಶೇಷ ಚೇತನ ಬಲಭೀಮ ಎಂಬಾತ ಹೆದರಿಕೆಯಿಂದ ವ್ಯಾಕ್ಸಿನ್​ ಹಾಕಿಸಿಕೊಳ್ಳಲಿಲ್ಲ.

ಈ ಹಿನ್ನೆಲೆ ಡಿಸಿ ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೂ ಬಲಭೀಮ ಮಾತ್ರ ಸುತರಾಂ ಒಪ್ಪಲಿಲ್ಲ. ವ್ಯಾಕ್ಸಿನ್ ತೆಗೆದುಕೊಳ್ಳುವರೆಗೆ ನಾನು ಇಲ್ಲಿಂದ ಹೋಗುವದಿಲ್ಲ ಎಂದು ಡಿಸಿ ಆತನ ಮುಂದೆಯೇ ಕುಳಿತರು. ಸುಮಾರು 20 ನಿಮಿಷದ ಬಳಿಕ ಬಲಭೀಮ ತನ್ನ ಹಟಬಿಟ್ಟು ವ್ಯಾಕ್ಸಿನ್ ಪಡೆಯಲು ಒಪ್ಪಿದಾಗ ಜಿಲ್ಲಾಧಿಕಾರಿ ಸ್ಥಳದಿಂದ ತೆರಳಿದರು.

ಮಗುವಿನ ನಿದ್ದೆ ಹಾಳಾಗದಂತೆ ಮಳೆಯಲ್ಲಿ ಮರಿಯನ್ನು ಅಪ್ಪಿ ಕುಳಿತ ಮಂಗ: ಅಮ್ಮಾ.. ನಿನಗ್ಯಾರು ಸಮ..!

ABOUT THE AUTHOR

...view details