ಕಲಬುರಗಿ:ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಡಬಲ್ ಸೆಂಚುರಿ ದಾಟಿದೆ. 221 ಜನರಿಗೆ ಮಹಾಮಾರಿ ಸೋಂಕು ತಗುಲಿರುವದು ದೃಡಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14,979 ಕ್ಕೆ ಏರಿಕೆಯಾಗಿದೆ.
ಕಲಬುರಗಿಯಲ್ಲಿಂದು 221 ಕೋವಿಡ್ ಕೇಸ್... ಯಾವುದೇ ಡಿಸ್ಚಾರ್ಜ್ ಇಲ್ಲ! - ಕಲಬುರಗಿ ಕೊರೊನಾ
ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಲಬುರಗಿಯಲ್ಲಿಂದು 200ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
![ಕಲಬುರಗಿಯಲ್ಲಿಂದು 221 ಕೋವಿಡ್ ಕೇಸ್... ಯಾವುದೇ ಡಿಸ್ಚಾರ್ಜ್ ಇಲ್ಲ! kalburgi covid case](https://etvbharatimages.akamaized.net/etvbharat/prod-images/768-512-8829066-481-8829066-1600290251747.jpg)
kalburgi covid case
ಸೋಂಕಿನಿಂದ ಇಂದು ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿ ಆಗಿಲ್ಲ. ಜತೆಗೆ ಯಾವುದೇ ಡಿಸ್ಚಾರ್ಜ್ ಕೂಡ ಆಗಿಲ್ಲ, ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 248 ಆಗಿದೆ. ಅಲ್ಲದೆ 2,613 ಸಿಕ್ರೀಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.