ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮಂಗಳವಾರ ನಗರದಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ.
ಕಲಬುರಗಿ ಸಿಎಎ ವಿರುದ್ಧ ಸಮಾವೇಶಕ್ಕೆ ದುಡ್ಡು ಕೊಟ್ಟು ಜನರನ್ನು ಕರೆತರಲಾಗಿದೆ: ಶಿವರಾಜ್ ಪಾಟೀಲ್ - Kalburgi BJP President Comment on Anti CAA Protest
ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದ್ದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದ್ದು, ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ನಡೆದ ಸಿಎಎ ವಿರುದ್ಧದ ಸಮಾವೇಶದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು ಜನರಲ್ಲಿ ತಪ್ಪು ಭಾವನೆ ಮೂಡಿಸ್ತಿದಾರೆ. ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದಾರೆ. ಒಂದು ಸಮುದಾಯದ ಸೀಮಿತ ಜನರನ್ನು ದುಡ್ಡುಕೊಟ್ಟು ಕರೆಸಿ ಸಮಾವೇಶ ಮಾಡಿದ್ದಾರೆ ಎಂದರು.
ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ, ಕಾಂಗ್ರೆಸ್ ಹಾಗೂ ಕಮ್ಯುನಿಷ್ಟರಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸೋ ಕೆಲಸ ನಡೀತಿದೆ. ಪೌರತ್ವ ಮಸೂದೆಯನ್ನು ಹಿಂದೆ ನೆಹರು ತಂದಿದ್ದರು. ಆದರೆ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಳ್ಳಲು ಈಗ ಪಿತೂರಿ ಮಾಡಲಾಗ್ತಿದೆ. ಮುಸ್ಲಿಂರನ್ನು ಕಡೆಗಣಿಸೋ ಪ್ರಶ್ನೆಯೇ ಇಲ್ಲ, ಇದನ್ನು ಅಲ್ಪಸಂಖ್ಯಾತ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.