ಕರ್ನಾಟಕ

karnataka

ETV Bharat / state

ಮನೆ ಮನೆಗೆ ತೆರಳಿ ಶಾಸಕ ಬಸವರಾಜ್ ಮತ್ತಿಮೂಡ್ ಜಾಗೃತಿ - ಕೊರೊನಾ ಬಗ್ಗೆ ಮನೆ,ಮನೆಗೆ ತೆರಳಿ ಶಾಸಕ ಬಸವರಾಜ್ ಮತ್ತಿಮೂಡ್ ಜಾಗೃತಿ

ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಶಹಾಬಾದ, ರಾಮಗಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಮನೆಗೆ ತೆರಳಿದ ಶಾಸಕ ಬಸವರಾಜ್ ಮತ್ತಿಮೂಡ್, ಜನರಲ್ಲಿ ಕೊರೊನಾ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತಾಗಿ ತಿಳಿ ಹೇಳಿದರು.

Kalburagi news
ಕೊರೊನಾ ಬಗ್ಗೆ ಮನೆ,ಮನೆಗೆ ತೆರಳಿ ಶಾಸಕ ಬಸವರಾಜ್ ಮತ್ತಿಮೂಡ್ ಜಾಗೃತಿ

By

Published : Mar 30, 2020, 6:23 PM IST

ಕಲಬುರಗಿ: ಕೊರೊನಾ ವೈರಸ್ ಕುರಿತಾಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಮನೆಯಿಂದ ಹೊರಬರದಂತೆ ಜನ ಜಾಗೃತಿ ಮೂಡಿಸಿದರು. ಜೊತೆಗೆ ಜನರಿಗೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿದರು.

ಕೊರೊನಾ ಬಗ್ಗೆ ಮನೆ,ಮನೆಗೆ ತೆರಳಿ ಶಾಸಕ ಬಸವರಾಜ್ ಮತ್ತಿಮೂಡ್ ಜಾಗೃತಿ

ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಶಹಾಬಾದ, ರಾಮಗಡ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿದ ಶಾಸಕ, ಮನೆ ಮನೆಗೆ ತೆರಳಿ ಜನರಲ್ಲಿ ಕೊರೊನಾ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ತಿಳಿ ಹೇಳುತ್ತಿರುವುದು ಕಾಣಿಸಿತು. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರುವಂತೆ ಜನರಲ್ಲಿ ಮನವಿ ಮಾಡಿದರು.

ಇದೇ ವೇಳೆ, ಪಡಿತರದಲ್ಲಿ ಸಿಗುವ ವಸ್ತುಗಳನ್ನು ಹೊರತುಪಡಿಸಿ ಗ್ರಾಮದ ಬಡ ಜನರಿಗೆ ಅಡುಗೆ ಎಣ್ಣೆ, ಖಾರ ಸೇರಿದಂತೆ ಅಗತ್ಯ ದಿನ ಬಳಕೆಯ ವಸ್ತುಗಳನ್ನು ಒದಗಿಸಿದರು.

For All Latest Updates

ABOUT THE AUTHOR

...view details