ಕರ್ನಾಟಕ

karnataka

ETV Bharat / state

ಸಾರಿಗೆ ವ್ಯವಸ್ಥೆ ಇಲ್ಲದೆ ಕಲಬುರಗಿ ಪೌರಕಾರ್ಮಿಕರ ಪರದಾಟ! - Kalburagi Civil Workers struggling

ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಟೋ, ಬಸ್ ಸಂಚಾರ ಇಲ್ಲದೆ ನಿತ್ಯ ಮನೆಯಿಂದ ಕರ್ತವ್ಯಕ್ಕೆ ಬರಲು, ಕೆಲಸ ಮುಗಿಸಿ ಮನೆಗೆ ತೆರಳಲು ಪೌರಕಾರ್ಮಿಕರು ಸಹ ಪರದಾಡುತ್ತಿದ್ದಾರೆ.

Kalburagi  Civil Workers  struggling without transportation
ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿರುವ ಕಲಬುರಗಿ ಪೌರ ಕಾರ್ಮಿಕರು

By

Published : Apr 13, 2020, 9:22 PM IST

ಕಲಬುರಗಿ: ಲಾಕ್‌ಡೌನ್ ಹಿನ್ನಲೆ ನಗರ ಸಾರಿಗೆ ಹಾಗೂ ಅಟೋ ಸಂಚಾರ ಸಂಪೂರ್ಣ ನಿಷೇಧ ಮಾಡಲಾಗಿದ್ದು, ನಿತ್ಯ ಸ್ವಚ್ಛತಾ ಸೇವೆಗೆ ಬರುವ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಕಲಬುರಗಿ ಪೌರಕಾರ್ಮಿಕರು
ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಮದ್ಯಾಹ್ನ 2 ಗಂಟೆವರೆಗೆ ಸ್ವಚ್ಛತಾ ಸೇವೆ ಮಾಡುವ ಪೌರಕಾರ್ಮಿಕರು ಅಟೋ, ಬಸ್ ಸಂಚಾರ ಇಲ್ಲದೆ ನಿತ್ಯ ಮನೆಯಿಂದ ಕರ್ತವ್ಯಕ್ಕೆ ಬರಲು, ಕೆಲಸ ಮುಗಿಸಿ ಮನೆಗೆ ತೆರಳಲು ಪರದಾಟ ನಡೆಸುತ್ತಿದ್ದಾರೆ. ಹೀರಾಪುರ, ಸುಲ್ತಾನಪುರ, ಹಾಗರಗಾ, ಕುಸನೂರ, ರಾಜಾಪುರ, ರಾಮತೀರ್ಥ, ರೋಜಾ ಹೀಗೆ ಸುಮಾರು 8-10 ಕಿ.ಮೀ. ದೂರದಿಂದ ಕೆಲಸಕ್ಕೆ ಬರುವ ಇವರು ಪ್ರತಿದಿನ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಬಿರು ಬಿಸಿಲಿನಲ್ಲಿಯೇ ಎರಡರಿಂದ ಮೂರು ಗಂಟೆ ಕಾಲ ಕಾಲ್ನಡಿಗೆಯಲ್ಲಿ ಸಾಗಿ ಮನೆ ಸೇರುತ್ತಿದ್ದಾರೆ‌.

ಇನ್ನು ಲಾಕ್​​ಡೌನ್ ಆದಾಗಿನಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದ್ದು, ವಾಹನದ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ABOUT THE AUTHOR

...view details