ಕಲಬುರಗಿ: ಸರ್ಕಾರಿ ಯೋಜನೆ ಲಾಭ ಪಡೆಯಲು ಕೇಂದ್ರ ಸರ್ಕಾರ ಆಧಾರ ಗುರುತಿನ ಚೀಟಿ ಕಡ್ಡಾಯ ಎಂದು ಘೋಷಿಸಿದೆ. ಬಹುತೇಕ ವ್ಯವಹಾರಗಳಿಗೆ ಆಧಾರ ಕಾರ್ಡ್ ಬೇಕೇಬೇಕು. ಆದರೆ ಕೆಲವರಿಗೆ ಇನ್ನೂ ಆಧಾರ್ ಕಾರ್ಡ್ ಸಿಗದೇ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಮಹಿಳೆಯೊಬ್ಬರು ಬರೋಬ್ಬರಿ ಹನ್ನೊಂದು ಬಾರಿ ಆಧಾರ ಕಾರ್ಡ್ಗೆ ಅರ್ಜಿ ಭರ್ತಿ ಮಾಡಿದ್ದಾರೆ ಇದುವರೆಗೆ ಕಾರ್ಡ್ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ. ಚಿತ್ತಾಪುರ ತಾಲೂಕಿನ ರಾವುರ ಗ್ರಾಮದ ನಿವಾಸಿ ಈರಮ್ಮ ಕೊಳ್ಳಿ ಎಂಬುವವರು ಆಧಾರ್‌ಗಾಗಿ ಕಳದೆ ಐದು ವರ್ಷದಿಂದ ವಾಡಿ, ಚಿತ್ತಾಪುರ ಕಲಬುರಗಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ.
ಸುಮಾರು 11 ಬಾರಿ ನೋಂದಣಿ ಮಾಡಿಸಿಕೊಂಡರು ಆಧಾರ್ ಕಾರ್ಡ್ ಸಿಗದೇ ಅರ್ಜಿ ತಿರಸ್ಕೃತಗೊಳ್ಳುತ್ತಿದೆ. ಹಲವುಬಾರಿ ಟೆಕ್ನಿಕಲ್ ತೊಂದರೆಯಿಂದ ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆ ಎಂದು ಹೇಳಿದ್ರೆ ಕೆಲವು ಬಾರಿ ಅರ್ಜಿ ಸ್ವಿಕೃತಗೊಂಡರು ಕಾರ್ಡ್ ಬರುತ್ತಿಲ್ಲ ಎಂದು ಮಹಿಳೆ ದೂರಿದ್ದಾಳೆ.
ಈರಮ್ಮ ಕೊಳ್ಳಿ, ಆಧಾರ್ಕಾರ್ಡ್ಗಾಗಿ ಅಲೆದಾಡುತ್ತಿರುವ ಮಹಿಳೆ ಸಿಲಿಂಡರ್ ಸಬ್ಸಿಡಿ, ರೆಷನ್ ಕಾರ್ಡ ನೋಂದಣಿ, ಉದ್ಯೋಗ ಖಾತ್ರಿ, ಜಾತಿ ಪ್ರಮಾಣಪತ್ರ ಸೇರಿದಂತೆ ಸರ್ಕಾರದ ಪ್ರತಿಯೊಂದು ಯೋಜನೆ ಲಾಭ ಪಡೆಯಲು ಆಧಾರ ಕಡ್ಡಾಯವಾಗಿ ಬೇಕು. ಹಲವು ಬಾರಿ ಪ್ರಯತ್ನಿಸಿದ್ರೂ ಆಧಾರ್ ಕಾರ್ಡ್ ಲಭ್ಯವಾಗದೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದೇವೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ.
ಆಧಾರ ನೋದಣಿಯಾಗದೇ ಅದೆಷ್ಟೋ ಕುಟುಂಬಗಳು ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲ. ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ಆಧಾರ ಕಾರ್ಡ್ ತಲುಪಿಸುವ ಬಗ್ಗೆ ಸರ್ಕಾರ ಗಂಭೀರ ನಡೆ ಇಡಬೇಕು. ರಾವುರ ಗ್ರಾಮದ ಈರಮ್ಮ ಅವರ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಆಧಾರ ಗುರುತಿನ ಕಾರ್ಡ್ ದೊರೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಹಿಳೆ ಜೊತೆಗೂಡಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕ್ರಾಂತಿವೀರ ಸಂಗೋಳಿ ರಾಯಣ್ಣ, ಯುವ ಗರ್ಜನೆ ಸಂಘದ ಅಧ್ಯಕ್ಷ ಜಗದೀಶ ಪೂಜಾರಿ ರಾವುರ ಎಚ್ಚರಿಕೆ ನೀಡಿದ್ದಾರೆ.