ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆ: ದಾಖಲಾತಿ ನೆಪದಲ್ಲಿ ತಹಶೀಲ್ದಾರ್​ ಕಚೇರಿ ಸಿಬ್ಬಂದಿಯಿಂದ ಭ್ರಷ್ಟಾಚಾರ - ತಹಶೀಲ್ದಾರ್​ ಕಚೇರಿ ಸಿಬ್ಬಂದಿಯಿಂದ ಹಣ ವಸೂಲಿ

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಲು ಬರುವವರಿಗೆ ಅಗತ್ಯ ದಾಖಲಾತಿ ನೀಡಲು ಕಲಬುರಗಿ ತಹಶೀಲ್ದಾರ್​ ಕಚೇರಿ ಸಿಬ್ಬಂದಿ ಲಂಚ ಪಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಈ ವಿಚಾರ ಬೆಳಕಿಗೆ ಬಂದ ತಕ್ಷಣ ತಹಶೀಲ್ದಾರ್‌ ಕಾರ್ಯವ್ರವೃತ್ತರಾಗಿದ್ದು ಹಣ ವಸೂಲಿಗೆ ಕಡಿವಾಣ ಹಾಕಿದ್ದಾರೆ.

kalburagi
ಹಣ ವಸೂಲಿ

By

Published : Dec 10, 2020, 12:33 PM IST

ಕಲಬುರಗಿ:ಗ್ರಾಮ ಪಂಚಾಯಿತಿ ಚುನಾವಣೆಯನ್ನೇ ಬಂಡವಾಳ ಮಾಡಿಕೊಂಡು ತಹಶೀಲ್ದಾರ್​ ಕಚೇರಿ ಸಿಬ್ಬಂದಿ ವಸೂಲಿ ದಂಧೆಗಿಳಿರುವುದು ಬಯಲಾಗಿದೆ.

ತಹಶೀಲ್ದಾರ್​ ಕಚೇರಿ ಸಿಬ್ಬಂದಿಯಿಂದ ಹಣ ವಸೂಲಿ.

ನಗರದ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಚುನಾವಣೆಗೆ ಸ್ಪರ್ಧಿಸಲು ಬರುವವರಿಗೆ ಅಗತ್ಯ ದಾಖಲಾತಿ ನೀಡಲು ಲಂಚ ಪಡೆಯುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಲಂಚ ಯಾವುದಕ್ಕೆ?

ವೋಟರ್ ಲಿಸ್ಟ್ ನೀಡಲು 200 ರೂ., ಖಾತಾ ಎಕ್ಸ್​ಟ್ರಾಕ್ಟ್ ಮಾಡಿಕೊಡಲು 200 ರೂ., ದಾಖಲೆಗಳಿಗೆ ಸಹಿ ಹಾಕಲು 100 ರೂ., ಜಾತಿ ಪ್ರಮಾಣ ಪತ್ರ ನೀಡಲು 400 ರೂ. ಸುಲಿಗೆ ಮಾಡಲಾಗುತ್ತಿದೆ. ಹಣ ಕೊಡದಿದ್ದರೆ ವಿಳಂಬ ಮಾಡುತ್ತಾ ಸತಾಯಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ನಾಮಿನೇಷನ್ ಫೈಲ್ ಮಾಡಲು ಕೊನೆ ದಿನಾಂಕ ಇದೇ ತಿಂಗಳು 11 ರಂದು ನಿಗದಿ ಮಾಡಲಾಗಿದೆ. ಹೀಗಾಗಿ ದಾಖಲೆ ಪಡೆಯಲು ಕೇಳಿದಷ್ಟು ಹಣವನ್ನು ಆಕಾಂಕ್ಷಿಗಳು ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಓದಿ: ಯೋಗೇಶ್​ ಗೌಡ ಕೊಲೆ ಪ್ರಕರಣ: ಸಿಬಿಐ ವಿಚಾರಣೆಗೆ ಹಾಜರಾದ ಆರೋಪಿ ಬಸವರಾಜ ಮುತ್ತಗಿ

ಈ ಬಗ್ಗೆ ತಹಶೀಲ್ದಾರ್ ಜಗನ್ನಾಥ ಪೂಜಾರಿ ಅವರನ್ನು ವಿಚಾರಿಸಿದಾಗ, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದರು. ಜೊತೆಗೆ ವಿಚಾರ ತಿಳಿದು ತಕ್ಷಣ ಕ್ರಮ ಕೈಗೊಂಡು ಹಣ ವಸೂಲಿಯನ್ನು ಬಂದ್ ಮಾಡಿಸಿದ್ದಾರೆ.

ABOUT THE AUTHOR

...view details