ಕಲಬುರಗಿ: ಕುರಿ ಸಾಕಾಣಿಕೆಯಲ್ಲಿ ನಷ್ಟವುಂಟಾಗಿ ಮನನೊಂದು ಬಾವಿಗೆ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ನಡೆದಿದೆ.
ಕುರಿಸಾಕಾಣಿಕೆಯಲ್ಲಿ ನಷ್ಟ : ಮನನೊಂದ ಕುರಿಗಾಯಿ ಆತ್ಮಹತ್ಯೆ - ಕಲಬುರಗಿ ಕುರಿಗಾಯಿ ಸಾವು ಸುದ್ದಿ
ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಕುರಿ ಸಾಕಾಣಿಕೆಯಲ್ಲಿ ನಷ್ಟವುಂಟಾಗಿ ಮನನೊಂದು ವ್ಯಕ್ತಿಯೊಬ್ಬ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸುಲೇಪೇಟ್ ನಿವಾಸಿ ನರಸಪ್ಪ ಪೂಜಾರಿ (27) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸುಮಾರು ವರ್ಷಗಳಿಂದ ಕುರಿ ಸಾಗಣಿಕೆ ಕೆಲಸ ಮಾಡುತ್ತಿದ್ದ ನರಸಪ್ಪ, ಕಳೆದ ಕೆಲ ದಿನಗಳಿಂದ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಮನನೊಂದಿದ್ದ ಎಂದು ತಿಳಿದುಬಂದಿದೆ. ಸುಮಾರು ಎರಡು ಲಕ್ಷ ರೂಪಾಯಿ ಸಾಲ ಮಾಡಿದ್ದು, ಮರಳಿಸಲು ಆಗದೆ ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಮೃತದೇಹ ಹೊರತೆಗೆದ್ದಾರೆ. ಕಳೆಬರ ಹೊರಗೆ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಸುಲೇಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.