ಕರ್ನಾಟಕ

karnataka

ETV Bharat / state

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡುವಂತೆ ವಕೀಲರ ಪ್ರತಿಭಟನೆ - kalaburgi republic day celebration incident

ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ವೇಳೆ ಮಹಾತ್ಮಾ ಗಾಂಧಿ ಭಾವಚಿತ್ರ ಮಾತ್ರ ಇಡಲಾಗಿತ್ತು. ಈ ವೇಳೆ ದಲಿತ ವಕೀಲರು ಅಂಬೇಡ್ಕರ್ ಭಾವಚಿತ್ರವನ್ನೂ ಇಡುವಂತೆ ಆಗ್ರಹಿಸಿದರು.

kalaburgi-republic-day-celebration-incident
ಕಲಬುರಗಿ ನ್ಯಾಯಾಲಯ

By

Published : Jan 26, 2020, 12:18 PM IST

ಕಲಬುರಗಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಲ್ಲದಿರುವುದನ್ನು ಖಂಡಿಸಿದ ವಕೀಲರು ಸ್ವತಃ ತಾವೇ ಅಂಬೇಡ್ಕರ್ ಭಾವಚಿತ್ರ ಇಡಲು ಯತ್ನಿಸಿದ ಘಟನೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.

ಧ್ವಜಾರೋಹಣದ ವೇಳೆ ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಮಾತ್ರ ಇಡಲಾಗಿತ್ತು. ಇದನ್ನು ಪ್ರಶ್ನಿಸಿದ ದಲಿತ ವಕೀಲರು ಅಂಬೇಡ್ಕರ್ ಭಾವಚಿತ್ರವನ್ನೂ ಇಡುವಂತೆ ಆಗ್ರಹಿಸಿದರು. ಯಾರೂ ಅಂಬೇಡ್ಕರ್ ಭಾವಚಿತ್ರ ಇಡದೇ ಇದ್ದಾಗ ವಕೀಲ ಹನುಮಂತ ಯಳಸಂಗಿ ನೇತೃತ್ವದಲ್ಲಿ ಸ್ವತಃ ತಾವೇ ಭಾವಚಿತ್ರ ಇಡಲು ಮುಂದಾದರು.

ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಇಡುವಂತೆ ವಕೀಲರ ಪ್ರತಿಭಟನೆ

ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಭಾವಚಿತ್ರ ಇಡಲು ಅವಕಾಶ ನೀಡಲಿಲ್ಲ. ಇದಕ್ಕೆ ವಕೀಲರು ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿ ಪ್ರತಿಭಟಿಸಿದರು. ಇದರಿಂದಾಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮೋಳಗುವ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಎತ್ತಿ ಹಿಡಿದು ವಕೀಲರು ಪ್ರತಿಭಟಿಸಿದರು.

ABOUT THE AUTHOR

...view details