ಕಲಬುರಗಿ:ದೆಹಲಿ ನಿಜಾಮುದ್ದೀನ್ ಜಮಾತ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮದ ವ್ಯಕ್ತಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದೆ.
ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದ ಕಲಬುರ್ಗಿ ವ್ಯಕ್ತಿ ಇಎಸ್‌ಐ ಆಸ್ಪತ್ರೆಗೆ ಶಿಫ್ಟ್..
ಪಡಸಾವಳಗಿ ಗ್ರಾಮದ ಅಂದಾಜು 35 ವರ್ಷದ ವಯಸ್ಸಿನ ವ್ಯಕ್ತಿ ಸಹ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮರಳಿದ್ದರು. ಇದೇ ಕಾರಣಕ್ಕೆ ವ್ಯಕ್ತಿಯನ್ನು ಸುಪರ್ದಿಗೆ ಪಡೆದು ಇಎಸ್ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ.
ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಸಭೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದ ಹಿನ್ನೆಲೆ ಕಲಬುರಗಿ ಜಿಲ್ಲೆಯಿಂದ ಸಭೆಯಲ್ಲಿ ಭಾಗಿಯಾದವರನ್ನೂ ಪತ್ತೆ ಹಚ್ಚುವ ಕಾರ್ಯವನ್ನ ಜಿಲ್ಲಾಡಳಿತ ಮಾಡುತ್ತಿದೆ.
ಪಡಸಾವಳಗಿ ಗ್ರಾಮದ ಅಂದಾಜು 35 ವರ್ಷದ ವಯಸ್ಸಿನ ವ್ಯಕ್ತಿ ಸಹ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮರಳಿದ್ದರು. ಇದೇ ಕಾರಣಕ್ಕೆ ವ್ಯಕ್ತಿಯನ್ನು ಸುಪರ್ದಿಗೆ ಪಡೆದು ಇಎಸ್ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಸದ್ಯ ವ್ಯಕ್ತಿಯ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಲಾಗಿದೆ. ಆತನನ್ನು ಭೇಟಿಯಾದವರ ಪತ್ತೆ ಕಾರ್ಯವನ್ನೂ ಕೂಡಾ ಜಿಲ್ಲಾಡಳಿತ ಮುಂದುವರೆಸಿದೆ.