ಕರ್ನಾಟಕ

karnataka

ETV Bharat / state

ಜೀವ ಭಯ ಬಿಟ್ಟು ತರಕಾರಿ ಖರೀದಿಗೆ ಮುಗಿಬಿದ್ದ ಕಲಬುರಗಿ ಜನತೆ! - social distance

ಕಲಬುರಗಿಯಲ್ಲಿ ಜನ ಸಾಮಾಜಿಕ ಅಂತರ ಕಡೆಗಣಿಸುತ್ತಿದ್ದಾರೆ. ತರಕಾರಿ ಮಾರುಕಟ್ಟೆ ಜನ ಜಂಗುಳಿಯಿಂದ ತುಂಬಿದೆ.

klb
klb

By

Published : Apr 1, 2020, 9:09 AM IST

ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 3ರಿಂದ 4ಕ್ಕೆ ಏರಿದೆ. ಆದ್ರೆ ಜೀವ ಭಯ ಬಿಟ್ಟು ಜನರು ತರಕಾರಿ ಖರೀದಿಗೆ ಮುಗಿಬೀಳುತ್ತಿದ್ದಾರೆ.

ಲಾಕ್ ಡೌನ್ ಸಂಪೂರ್ಣ ಉಲ್ಲಂಘನೆಯಾಗುತ್ತಿದೆ. ಎಪಿಎಂಸಿ ತರಕಾರಿ ಮಾರುಕಟ್ಟೆ ಜನ ಜಂಗುಳಿಯಿಂದ ತುಂಬಿದೆ. ಯಾವುದೇ ಮುಂಜಾಗೃತ ಕ್ರಮಗಳಿಲ್ಲದೆ ತರಕಾರಿ ಸಂತೆ ನಡೆದಿದೆ.

ಸಾಮಾಜಿಕ ಅಂತರ ಮರೆತ ಕಲಬುರಗಿ ಜನತೆ

ಜನರು ಜೀವಭಯ ಬಿಟ್ಟು ಗುಂಪು ಗುಂಪಾಗಿ ನಿಂತು ತರಕಾರಿ ಖರೀದಿಸುತ್ತಿದ್ದಾರೆ. ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ ಪಾಲಿಸುವದು ಅಗತ್ಯವಿದೆ. ಸುರಕ್ಷತೆ ನಿಟ್ಟಿನಲ್ಲಿ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕಣ್ಣಿ ತರಕಾರಿ ಮಾರ್ಕೆಟ್​ ಸೇರಿ ಹಲವು ತರಕಾರಿ ಮಾರ್ಕೆಟ್​ಗಳನ್ನು ಬಂದ್ ಮಾಡಲಾಗಿದೆ.

ಆದರೆ ಎಪಿಎಂಸಿ ತರಕಾರಿ ಮಾರ್ಕೆಟ್​ನಲ್ಲಿ ಮಾತ್ರ ಪರಸ್ಪರ ಅಂತರ ಕಾಯ್ದುಕೊಳ್ಳದೆ ಜನರು ತರಕಾರಿ ಮಾರಾಟ ಮಾಡಲು ಹಾಗೂ ಖರೀದಿಸಲು ಮುಗಿಬೀಳುತ್ತಿದ್ದಾರೆ. ಸಾಮಾಜಿಕ ಅಂತರ ಸಂಪೂರ್ಣ ಕಡೆಗಣಿಸಲಾಗಿದೆ.

ABOUT THE AUTHOR

...view details