ಕಲಬುರಗಿ: ಅಪ್ರಾಪ್ತ ಬಾಲಕಿ (10) ಮೇಲೆ ಸ್ವಂತ ಮಾವನೇ ಅತ್ಯಾಚಾರವೆಸಗಿದ್ದು, ಈಗ ಪೊಲೀಸರ ಅತಿಥಿಯಾದ ಘಟನೆ ಶರಣ ಸಿರಸಗಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್ - ಕಲಬುರಗಿ
ಅಪ್ರಾಪ್ತ ಬಾಲಕಿ (10) ಮೇಲೆ ಸ್ವಂತ ಮಾವನೇ ಅತ್ಯಾಚಾರವೆಸಗಿದ ಘಟನೆ ಕಲಬುರಗಿಯ ಶರಣ ಸಿರಸಗಿ ಗ್ರಾಮದಲ್ಲಿ ನಡೆದಿದೆ

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಅರೆಸ್ಟ್
ಆಳಂದ ತಾಲೂಕಿನ ದುತ್ತರಗಾಂವ ನಿವಾಸಿ ಪಿರಪ್ಪ ಪೂಜಾರಿ ಬಂಧಿತ ಆರೋಪಿ ಎಂದು ನಗರ ಪೊಲೀಸ್ ಆಯುಕ್ತ ಸತೀಶ ಕುಮಾರ ತಿಳಿಸಿದ್ದಾರೆ. ತಮ್ಮ ಊರಿನಿಂದ ಶರಣಸಿರಸಗಿ ಗ್ರಾಮಕ್ಕೆ ಬಂದಿದ್ದ ಆರೋಪಿ ಪಿರಪ್ಪ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಹೆದರಿಸಿ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಮಹಿಳಾ ಠಾಣೆಯ ಪೊಲೀಸರು ಕಾಮುಕನನ್ನು ಹಿಡಿದು ಜೈಲಿಗೆ ಅಟ್ಟಿದ್ದಾರೆ.