ಕರ್ನಾಟಕ

karnataka

ETV Bharat / state

ನಿಷೇಧಾಜ್ಞೆ ಉಲ್ಲಂಘಿಸಿ ರಥೋತ್ಸವ: ಕಲಬುರಗಿ ರಾವೂರ್ ಗ್ರಾಮ ಸೀಲ್​​​ಡೌನ್​​​​​ - Chittapura village Sealdown

ನಿಷೇಧಾಜ್ಞೆ ಉಲ್ಲಂಘಿಸಿ ಲಾಕ್​​​ಡೌನ್​ ನಡುವೆಯೂ ರಾವೂರ್ ಗ್ರಾಮಸ್ಥರು ಸಿದ್ದಲಿಂಗೇಶ್ವರ ರಥೋತ್ಸವ ನಡೆಸಿದ ಹಿನ್ನೆಲೆ ಜಿಲ್ಲಾಡಳಿತ ಇಡೀ ಗ್ರಾಮವನ್ನೇ ಸೀಲ್​​ಡೌನ್ ಮಾಡಿದೆ.

Kalaburgi district Chittapura village Sealdown
ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮ ಸಂಪೂರ್ಣ ಸ್ತಬ್ಧ

By

Published : Apr 20, 2020, 5:29 PM IST

ಕಲಬುರಗಿ: ಸೀಲ್​​ಡೌನ್ ಹಿನ್ನೆಲೆ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮ ಸಂಪೂರ್ಣ ಸ್ತಬ್ಧಗೊಂಡಿದೆ. ಪೊಲೀಸರು ಗ್ರಾಮದ ಎಲ್ಲಾ ಬಡಾವಣೆಗಳಿಗೆ ಬ್ಯಾರಿಕೇಡ್ ಹಾಗೂ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿ ಜಿಲ್ಲೆಯ ರಾವೂರ್ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ರಥೋತ್ಸವ ನಡೆಸಿದ ಹಿನ್ನೆಲೆ ಗ್ರಾಮವನ್ನು ಜಿಲ್ಲಾಡಳಿತ ಸೀಲ್​​​ಡೌನ್ ಮಾಡಿದೆ.

ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮ ಸಂಪೂರ್ಣ ಸ್ತಬ್ಧ

ಸೀಲ್​ಡೌನ್​ ಹಿನ್ನೆಲೆ ಗ್ರಾಮ ಸಂಪೂರ್ಣ ಸ್ತಬ್ಧಗೊಂಡಿದ್ದು, ಮನೆಯಿಂದ ಯಾರೂ ಹೊರಬರದಂತೆ ತಡೆಯಲು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ABOUT THE AUTHOR

...view details