ಕರ್ನಾಟಕ

karnataka

ETV Bharat / state

ಕಲಬುರಗಿ: ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಸನಿಗಳ ಬಂಧನ - Kalaburagi news

ಕಲಬುರಗಿ ನಗರದ ಪ್ರಗತಿ ಕಾಲೋನಿಯ ಪಾರ್ಕ್‌ಗೆ ಬರುತ್ತಿದ್ದ, ಕೆಲವರು ಪ್ರತಿನಿತ್ಯ ಗಾಂಜಾ ಸೇದುತ್ತಿದ್ದಾರೆಂಬ ಮಾಹಿತಿ ಅರಿತ ಪೊಲೀಸರು ಹೊಂಚುಹಾಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಸನಿಗಳ ಬಂಧನ
ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಸನಿಗಳ ಬಂಧನ

By

Published : Sep 11, 2020, 9:05 PM IST

ಕಲಬುರಗಿ: ಸಾರ್ವಜನಿಕ ಉದ್ಯಾನವನದಲ್ಲಿ ಗಾಂಜಾ ಸೇದುತ್ತಿದ್ದ, ಇಬ್ಬರು ವ್ಯಸನಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಪ್ರಗತಿ ಕಾಲೋನಿಯ ಪಾರ್ಕ್‌ಗೆ ಬರುತ್ತಿದ್ದ, ಕೆಲವರು ಪ್ರತಿನಿತ್ಯ ಗಾಂಜಾ ಸೇದುತ್ತಿದ್ದಾರೆಂಬ ಮಾಹಿತಿ ಅರಿತ ಪೊಲೀಸರು ಹೊಂಚುಹಾಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹ್ಮದ್ ಖಾನ್ ಹಾಗೂ ಸೈಯದ್ ಸದುದ್ದೀನ್ ಬಂಧಿತ ಆರೋಪಿಗಳು.

ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಸನಿಗಳ ಬಂಧನ

ಮಹ್ಮದ್ ಖಾನ್ ಗರೀಬ್ ಕಾಲೋನಿ ನಿವಾಸಿಯಾಗಿದ್ದು, ಸೈಯದ್ ಸದುದ್ದೀನ್ ಆಜಾದಪುರ ರಸ್ತೆ ನಿವಾಸಿಯಾಗಿದ್ದಾನೆ. ಗಾಂಜಾ ಸೇದುವುದನ್ನು ರೂಡಿಸಿಕೊಂಡಿದ್ದ ವ್ಯಸನಿಗಳು ಪ್ರತಿನಿತ್ಯ ಪಾರ್ಕ್​ನಲ್ಲಿ ಕುಳಿತು ಗಾಂಜಾ ಸೇವನೆ ಮಾಡುತ್ತಿದ್ದರು. ಬಂಧಿತರಿಂದ ಗಾಂಜಾ ತುಂಬಿದ ಸಿಗರೇಟ್ ಪಾಕೆಟ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಧ ಕೆಜಿ ಗಾಂಜಾ ವಶ:

ಇನ್ನೊಂದಡೆ ನಗರದ ಫೀರ ಬಂಗಾಲಿ ದರ್ಗಾ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಅರ್ಧ ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಯಾ ಮೋಹಲಾ ನಿವಾಸಿ ಶೇಕ್ ಇಕ್ಬಾಲ್ ಬಂಧಿತ ಆರೋಪಿ, ಇನ್ನೋರ್ವ ಮಾರಾಟಕ್ಕೆ ಗಾಂಜಾ ಒದಗಿಸುತ್ತಿದ್ದ ಬಾಪು ನಗರ ನಿವಾಸಿ ರಮೇಶ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details